ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾದ ಯೂಟರ್ನ್: ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಿರಿಮಂಜೆಶ್ವರ ಗ್ರಾಮದ ನಾಗೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ರಳ್ಳಿ ಕೂಡುರಸ್ತೆಗೆ ಅವೈಜ್ಞಾನಿಕವಾದ ಯೂಟರ್ನ್ ಕೊಡಲಾಗಿದ್ದು, ಇದರಿಂದ ಕಳೆದ ಹಲವಾರು ದಿನಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂಬಂಧ ಪಟ್ಟವರು ತಕ್ಷಣ ಈ ವ್ಯವಸ್ಥೆಯನ್ನು ಸರಿಪಡಿಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೇಂದು ಆಗ್ರಹಿಸಿ ಸೋಮವಾರ ನಾಗೂರು ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

Call us

Click Here

ಈ ಬಗ್ಗೆ ಮಾತನಾಡಿದ ಗ್ರಾಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಶೇಖರ ಖಾರ್ವಿ, ನಾಗೂರಿನ ಸುತ್ತ ಇರುವ ಹತ್ತು ಹಳ್ಳಿಯ ಜನರು ತಮ್ಮ ದಿನನಿತ್ಯದ ಕಾರ್ಯಗಳಿಗೆ, ಬ್ಯಾಂಕ್, ಸೊಸೈಟಿ ವ್ಯವಹಾರಕ್ಕೆ, ಗ್ರಾಪಂ ಕಚೇರಿ ಕೆಲಸಕ್ಕೆ ಈ ಪೇಟೆಯನ್ನು ಅವಲಂಬಿಸಿದ್ದಾರೆ. ಅಲ್ಲದೇ ದೇವಸ್ಥಾನ, ಮಸೀದಿ ಮತ್ತು ಕಲ್ಯಾಣ ಮಂಟಪಗಳು ಇಲ್ಲಿರುವುದರಿಂದ ಪ್ರತಿದಿನ ಪೇಟೆ ಜನಭರಿತವಾಗಿರುತ್ತದೆ. ಇವರೆಲ್ಲರೂ ಹೆದ್ದಾರಿ ತಲುಪಿದ ತಕ್ಷಣ ಎದುರಾಗುವ ಯೂಟರ್ನ್ ಮೂಲಕ ವಿರುದ್ಧ ದಿಕ್ಕಿನಿಂದ ಸಂಚರಿಸುತ್ತಾರೆ. ಹೆಚ್ಚಾಗಿ ದ್ವಿಚಕ್ರ ಹಾಗೂ ಕಾರುಗಳು ಅನಿವಾರ್ಯವಾಗಿ ಹೆದ್ದಾರಿಗೆ ಬರುವುದರಿಂದ ಹೈವೆಯಲ್ಲಿ
ವೇಗವಾಗಿ ಹೋಗುತ್ತಿರುವ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತದೆ. ಸ್ವಲ್ಪ ದೂರದಲ್ಲಿ ಶಾಲೆಯಿದ್ದು, ಮಕ್ಕಳು ಹಾಗೂ ಪಾಲಕರು ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಅವೈಜ್ಞಾನಿಕ ಯೂಟರ್ನ್ ಕಾರಣ ಎಂದು ಆರೋಪಿಸಿದರು. ಈ ಗಂಭಿರ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಒದಗಿಸಬೇಕು. ಹಾಗೂ ಶೀಘ್ರದಲ್ಲಿ ಸರ್ವಿಸ್ ರಸ್ತೆಗಳನ್ನು ಮಾಡಬೇಕು. ನಾದುರಸ್ತಿಯಲ್ಲಿರು ಬೀದಿದೀಪಗಳನ್ನು ಸರಿಪಡಿಸಬೇಕು. ಮಳೆಗಾಲದಲ್ಲಿ ಮಳೆನೀರು ರಸ್ತೆಯಲ್ಲಿ ಶೇಖರಣೆಯಾಗುತ್ತಿದ್ದು, ಸರಾಗವಾಗಿ ನೀರು ಹರಿದುಹೋಗಲು ಒಳಚರಂಡಿಗಳನ್ನು ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು. ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರವಾಗಿ ಮುಕ್ತಿ ದೊರೆಯದಿದ್ದರೆ ಮುಂದಿನದಿನಗಳಲ್ಲಿ ರಸ್ತೆತಡೆ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ರಾಹೆ ಗುತ್ತಿಗೆದಾರ ಕಂಪನಿ ಜಿಎಂ ಪ್ರಮೋದ್ ಸಾವಲ್ಕರ್, ರಾಹೆ ಅಭಿಯಂತರ ಚೆನ್ನಯ್ಯ ಇವರಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಎಲ್ಲಾ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಮಡಲಾಗುವುದು ಎಂದರು. ಇಲಾಖೆಯ ಸುದೇಶ್ ಶೆಟ್ಟಿ, ಪ್ರಫುಲ್ ಪಕ್ಡೆ, ಭೋಜಕರ್, ಡೆಪ್ಯುಟಿ ತಹಶೀಲ್ದಾರ್ ನರಸಿಂಹ ಕಾಮತ್, ಜಿಪಂ ಸದಸ್ಯೆ ಗೌರಿ ದೇವಾಡಿಗ, ರಾಜು ದೇವಾಡಿಗ, ತಬ್ರೇಜ್ ನಾಗೂರು, ಕೃಷ್ಣ, ಈಶ್ವರ ದೇವಾಡಿಗ ಮತ್ತಿತರರು ಇದ್ದರು.

Leave a Reply