ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೊಸಾಡು ಗ್ರಾಮದ ಅರಾಟೆಯ ಸುಬ್ರಹ್ಮಣ್ಯ ಭಜನಾ ಮಂಡಳಿಯ ಉದ್ಘಾಟನೆ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಂಗಮಂಟಪದಲ್ಲಿ ನಡೆಯಿತು.
ಹಿರಿಯ ಭಜನಾ ಕಲಾವಿದ ಕೃಷ್ಣ ಮೊಗವೀರ ನೂತನ ಭಜನಾ ಮಂಡಳಿಯನ್ನು ಉದ್ಘಾಟಿಸಿದರು. ಎಂ. ಎಂ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ತಾಲ್ಲೂಕು ಭಜನಾ ಮಂಡಳಿಗಳ ಸಮಿತಿ ಅಧ್ಯಕ್ಷ ಜಯಕರ ಪೂಜಾರಿ ಗುಲ್ವಾಡಿ, ವಂಡ್ಸೆ ವಲಯ ಅಧ್ಯಕ್ಷ ವಸಂತ ಶೆಟ್ಟಿ ದೇವಲ್ಕುಂದ, ರಘು ಶೆಟ್ಟಿ ಅರಾಟೆ, ಅರಾಟೆ ಸುಬ್ರಹ್ಮಣ್ಯ ಭಜನಾ ಮಂಡಳಿಯ ಅಧ್ಯಕ್ಷ ಸುರೇಶ ಪೂಜಾರಿ, ಕಾರ್ಯದರ್ಶಿ ರಾಮ ಪೂಜಾರಿ ಇದ್ದರು. ಶಶಿಕಲಾ ಸ್ವಾಗತಿಸಿದರು. ಸ್ವಾತಿ ಪ್ರದೀಪ್ ಆಚಾರ್ಯ ಪ್ರಾಸ್ತವಿಕವಾಗಿ ಮಾತನಾಡಿದರು. ಸ್ಮಿತಾ ರಾಘವೇಂದ್ರ ಆಚಾರ್ಯ ನಿರೂಪಿಸಿದರು. ರೇಖಾ ಸತೀಶ್ ನಾಯ್ಕ್ ವಂದಿಸಿದರು.