ಮಕ್ಕಳ ನಾಟಕಗಳ ಗುಚ್ಚ ‘ಅಮೃತ ಸಂಜೀವಿನಿ’ ಪುಸ್ತಕ ಬಿಡುಗಡೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾಟಕಕಾರ, ಸಾಹಿತಿ, ಶಿಕ್ಷಕ ಕೇಶವ ಶ್ಯಾನುಭಾಗ್ ಅವರು ಬರೆದ ಮಕ್ಕಳ ನಾಟಕಗಳ ಗುಚ್ಚ ‘ಅಮೃತ ಸಂಜೀವಿನಿ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಮಾರಣಕಟ್ಟೆಯ ವಾಸುಕಿ ಸಭಾಭವನದಲ್ಲಿ ಜರುಗಿತು.

Call us

Click Here

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳ ಭಾವನೆಗಳನ್ನು ಅರಳಿಸಿ, ಅವರನ್ನು ಸೃಜನಶೀಲರನ್ನಾಗಿಸಲು ನಾಟಕಗಳು ಸಹಕಾರಿಯಾಗಿವೆ. ಒತ್ತಡದೊಂದಿಗೆ ಕೇವಲ ವಿಷಯಗಳ ಅಧ್ಯಯನಕ್ಕಷ್ಟೇ  ಸೀಮಿತಗೊಳ್ಳುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ. ವಿವಿಧ ಕಥಾವಸ್ತುಗಳನ್ನು ಒಳಗೊಂಡಿರುವ ಕಿರುನಾಟಕಗಳನ್ನು ಸೇರಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಕೃತಿಕಾರರ ಶ್ರಮ ನಿಜವಾಗಲೂ ಶ್ಲಾಘನೀಯ. ಮಕ್ಕಳ ಸಾಹಿತ್ಯವನ್ನು ಮಕ್ಕಳ ಮನಸ್ಸಿನ ಭಾವನೆ ಹಾಗೂ ಪರಿಧಿಯ ಅರಿವಿನಲ್ಲಿ ಬರೆದಾಗ, ಅದು ಅವರಲ್ಲಿ ಹೊಸಚಿಂತನೆ ಬೆಳೆಯಲು ಪ್ರೇರಪಣೆ ನೀಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಕಸಾಪ ಘಟಕದ ಅಧ್ಯಕ್ಷ ಡಾ. ಕಿಶೋರ ಕುಮಾರ ಶೆಟ್ಟಿ ವಹಿಸಿದ್ದರು. ಖ್ಯಾತರಂಗ ಕರ್ಮಿ ಗಣೇಶ ಕಾರಂತರು ಪುಸ್ತಕ ಪರಿಚಯವನ್ನು ಮಾಡಿದರು.

ಮುಖ್ಯ ಅತಿಥಿಗಳಾಗಿ ಹವ್ಯಾಸಿ ಬರಹಗಾರ ನಿ.ರಾಮ ಭಟ್, ನಾಟಕಕಾರ ರಾಮ ಎಲ್ಲಂಗಳ ವಾಮಂಜೂರು, ಬೈಂದೂರು ಕಸಾಪ ಘಟಕದ ಅಧ್ಯಕ್ಷ ರವೀಂದ್ರ ಎಚ್, ಬಾರಂದಾಡಿ ಶಾಲಾ ಮುಖ್ಯ ಶಿಕ್ಷಕಿ ಮಿತಾ ಬಿ, ಪುಷ್ಪ ಎಲ್ಲಂಗಳ, ಸಭಾಭವನದ ಮಾಲಕ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ಕೃತಿಕಾರ ಕೇಶವ ಶ್ಯಾನುಭಾಗ್ ಎಲ್ಲಂಗಳ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ರವಿರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ರಾಜೀವ ಸ್ವಾಗತಿಸಿ, ಜಯರಾಮ ಪಟಗಾರ ವಂದಿಸಿದರು.

Click here

Click here

Click here

Click Here

Call us

Call us

Leave a Reply