Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮತ್ಸ್ಯ ಬಂಧನ ಸಂಸ್ಥೆಯ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕಕ್ಕೆ ಎಲ್ಲೂರಿನಲ್ಲಿ ಶಿಲಾನ್ಯಾಸ
    ಊರ್ಮನೆ ಸಮಾಚಾರ

    ಮತ್ಸ್ಯ ಬಂಧನ ಸಂಸ್ಥೆಯ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕಕ್ಕೆ ಎಲ್ಲೂರಿನಲ್ಲಿ ಶಿಲಾನ್ಯಾಸ

    Updated:19/01/2021No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು: ಮತ್ಸ್ಯ ಸಂಪತ್ತನ್ನು ಬಳಸಿಕೊಳ್ಳುವ ಮೂಲಕ ಮೀನುಗಾರಿಕೆಗೆ ಸಹಕಾರಿಯಾಗುವ ಉದ್ಯಮ ಈ ಭಾಗಕ್ಕೆ ಅಗತ್ಯವಾಗಿದೆ. ಬಲಿತ ಮೀನುಗಳನ್ನು ಬಳಸಿಕೊಂಡು, ಮೀನುಗಾರಿಕೆಗೆ ಆಶ್ರಯವಾಗುವ ಈ ಉದ್ಯಮ ಯಶಸ್ವಿಯಾಗಿ ಬೆಳೆಯಲಿ. ಗೋವಿಂದ ಬಾಬು ಪೂಜಾರಿಯವರಲ್ಲಿನ ಪರಿಶ್ರಮ, ಶೃದ್ದೆಯು ಅವರನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲಿದೆ ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    Click Here

    Call us

    Click Here

    ಅವರು ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಮತ್ಸ್ಯ ಬಂಧನ ಪ್ರೈವೆಟ್ ಲಿಮಿಟೆಡ್ ವತಿಯಿಂದ ನಿರ್ಮಾಣವಾಗುವ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಮತ್ಸ್ಯಬಂಧನ ಮೀನಿನ ಮೌಲ್ಯವರ್ಧಿತ ಖಾದ್ಯಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಜೂನ್‌ನಲ್ಲಿಯೇ ಬಿಡುಗಡೆಗೊಳಿಸಿದ್ದಾರೆ. ಮೀನಿನ ಖಾದ್ಯಗಳ ಮಾರುಕಟ್ಟೆ ವ್ಯವಸ್ಥೆಗೆ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಿಕೊಂಡರೆ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು.

    ಇವತ್ತು ರಾಜ್ಯದ ಮೂರು ಜಿಲ್ಲೆಗಳಲ್ಲಿ ಕಡಲ ಮೀನುಗಾರಿಕೆ ನಡೆಯುತ್ತದೆ. 27 ಜಿಲ್ಲೆಗಳಲ್ಲಿ ಒಳನಾಡು ಮೀನುಗಾರಿಕೆ ನಡೆಯುತ್ತದೆ. 4.5ಲಕ್ಷ ಟನ್ ಮೀನು ಕಡಲ ಮೀನುಗಾರಿಕೆಯಿಂದ ದೊರೆತರೆ, 2.5ಲಕ್ಷ ಟನ್ ಮೀನು ಒಳನಾಡು ಕೆರೆಗಳಲ್ಲಿ ದೊರೆಯುತ್ತದೆ. ದೇಶದಲ್ಲಿಯೇ ಕಡಲ ಮೀನುಗಾರಿಕೆಯಲ್ಲಿ ರಾಜ್ಯ 4ನೇ ಸ್ಥಾನದಲ್ಲಿದೆ. ಇನ್ನೆರಡು ವರ್ಷದಲ್ಲಿ ಅದು ಮೊದಲ ಸ್ಥಾನಕ್ಕೆ ಬರುವುದು ನಮ್ಮ ಗುರಿ ಎಂದು ಸಚಿವರು ಹೇಳಿದರು.

    ರಾಜ್ಯದಲ್ಲಿ ಮೀನುಗಾರಿಕಾ ಬೋಟ್‌ಗಳಿಗೆ ಈಗ ಚೈನಾ ಮೇಡ್ ಯಂತ್ರಗಳ ಬಳಸಲಾಗುತ್ತದೆ. ಪ್ರಧಾನಿಯವರ ಚಿಂತನೆಯ ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಂತೆ ದೇಶಿ ನಿರ್ಮಿತ ಯಂತ್ರಗಳನ್ನು ಬೋಟ್‌ಗಳಿಗೆ ಬಳಸುವಂತಾದರೆ ಮೀನುಗಾರರು ಸ್ವಾಗತಿಸುತ್ತಾರೆ. ಮೀನುಗಾರರು ದೇಶಿ ಯಂತ್ರಗಳ ಬಗ್ಗೆ ಒಲವು ಹೊಂದಿದ್ದಾರೆ. ದೇಶಿ ಕಂಪೆನಿಗಳ ಯಂತ್ರಗಳನ್ನು ಚೀನಿ ಯಂತ್ರಗಳ ಗುಣಮಟ್ಟಕ್ಕೆ ಕಡಿಮೆಯಾಗದ ರೀತಿಯಲ್ಲಿ, ಸ್ಪರ್ಧಾತ್ಮಕ ಬೆಲೆಯ ಯಂತ್ರಗಳನ್ನು ಸಿದ್ಧವಾದರೆ ಮೀನುಗಾರರ ಸ್ವಾಭಿಮಾನಕ್ಕೂ ಕಾರಣವಾಗುತ್ತದೆ. ಈ ಬಗ್ಗೆ ಸಂಸದರು ವಿಶೇಷ ಒತ್ತು ನೀಡಬೇಕು ಎಂದರು.

    Click here

    Click here

    Click here

    Call us

    Call us

    ಇದನ್ನೂ ಓದಿ
    ► ಕುಂಭಾಶಿ: 1008 ಕಾಯಿ ಗಣಹೋಮದಲ್ಲಿ ಸಿಎಂ ಬಿಎಸ್‌ವೈ ಭಾಗಿ – https://kundapraa.com/?p=44278 .

    ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯ ಜನರು ಬುದ್ಧಿವಂತರು, ಸ್ವಾಭಿಮಾನಿಗಳು. ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಭಾಗದಲ್ಲಿ ಮತ್ಸ್ಯ ಸಂಪತ್ತನ್ನು ಬಳಸಿಕೊಂಡು ಮೌಲ್ಯವರ್ಧಿತ ಉತ್ಪನ್ನವಾಗಿಸುವ ನಿಟ್ಟಿನಲ್ಲಿ ಗೋವಿಂದ ಬಾಬು ಪೂಜಾರಿಯವರು ಮತ್ಸ್ಯ ಬಂಧನ ಸಂಸ್ಥೆಯ ಮೂಲಕ ಮುಂದಾಗಿರುವುದು ಸ್ವಾಗತಾರ್ಹ. ಹಿಂದುಳಿದಿರುವ ಬೈಂದೂರು ಭಾಗದ ಪ್ರದೇಶಗಳಿಗೆ ಇಂತಹ ಉದ್ಯಮಗಳ ಅಗತ್ಯವಿದೆ. ಇದರಿಂದ ಮೀನುಗಾರಿಕೆಗೂ ಅನುಕೂಲವಾಗುವುದರ ಜೊತೆಗೆ ನಿರುದ್ಯೋಗ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ಹೇಳಿದರು.

    ಗೋವಿಂದ ಬಾಬು ಪೂಜಾರಿಯವರು ತನ್ನ ಊರಿನಲ್ಲಿ ಉದ್ಯಮ ಸ್ಥಾಪಿಸುವ ಮೂಲಕ ಉದ್ಯೋಗ ನೀಡುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಗೇರುಬೀಜ ಕಾರ್ಖಾನೆ ಬಿಟ್ಟರೆ ಬೇರೆ ಉದ್ಯಮಗಳಿಲ್ಲ. ಮತ್ಸ್ಯಬಂಧನ ಸಂಸ್ಥೆ ಆ ಕೊರತೆಯನ್ನು ನೀಗಿಸಲಿ ಎಂದು ಹೇಳಿದ ಅವರು, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಪ್ರತೀಮನೆಗೂ ಶುದ್ಧ ಕುಡಿಯುವ ನೀರು ಕೊಡುವ ಕಾರ್ಯ ವಾಗುತ್ತಿದೆ. ಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್ ವೇ ನನ್ನ ಕನಸಾಗಿದ್ದು, ಶೀಘ್ರ ಅನುಷ್ಠಾನ ಆಗಲಿದೆ ಎಂದು ಸಂಸದರು ಹೇಳಿದರು. ಈ ಸಂದರ್ಭದಲ್ಲಿ ಸಂಸದರು ಬಾಬು ಗೋವಿಂದ ಪೂಜಾರಿ ಅವರನ್ನು ಅಭಿನಂದಿಸಿದರು.

    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮಾತನಾಡಿ, ಇವತ್ತು ಸಾಕಷ್ಟು ಮಂದಿ ಕರೋನಾ ಕಾರಣದಿಂದ ಉದ್ಯೋಗ ಕಳೆದು ಊರಿಗೆ ಮರಳಿದ್ದಾರೆ.ಇಲ್ಲಿ ಉದ್ಯಮ ಸ್ಥಾಪನೆಯಾಗುವುದರಿಂದ ಅಂತವರಿಗೆ ಇಲ್ಲಿ ಉದ್ಯೋಗ ದೊರಕಿಸಿಕೊಡುವುದರ ಜೊತೆಗೆ ಕೃಷಿ ಮಾಡಲು ಸಹಾಯವಾಗುತ್ತದೆ. ಬದುಕಿನಲ್ಲಿ ಶ್ರೀಮಂತಿಕೆ ಮುಖ್ಯವಲ್ಲ. ಹೃದಯ ಶ್ರೀಮಂತಿಕೆ ಮುಖ್ಯ, ಅದು ಉದ್ಯೋಗ ನೀಡುವಂತಹದ್ದು. ಮೀನಿನ ಮೌಲ್ಯವರ್ಧಿತ ಉತ್ಪನ್ನಗಳು, ಖಾದ್ಯಗಳು ಇವತ್ತಿನ ವೇಗದ ಯುಗಕ್ಕೆ ಅನುಕೂಲವಾಗುತ್ತದೆ. ಆನ್‌ಲೈನ್ ಮಾರುಕಟ್ಟೆಯ ಸಮರ್ಪಕ ಬಳಕೆಯಿಂದ ಬೇಗ ಯಶಸ್ಸು ಸಾಧಿಸಬಹುದು ಎಂದರು.

    ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಶುಭಾಶಂಸನೆಗೈದರು.

    ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಎಂ.ಡಿ ಎಂ.ಎಲ್ ದೊಡ್ಮನಿ, ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿ.ಪಂ.ಸದಸ್ಯರುಗಳಾದ ಶಂಕರ ಪೂಜಾರಿ, ಗೌರಿ ದೇವಾಡಿಗ, ಗೀತಾಂಜಲಿ ಸುವರ್ಣ, ದ.ಕ-ಉಡುಪಿ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕುಂದಾಪುರ ತಾ.ಪಂ. ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾ.ಪಂ. ಸದಸ್ಯ ವಿಜಯ ಶೆಟ್ಟಿ, ಜ್ಯೋತಿಷಿ ರಘುನಾಥ ಜೋಯಿಸ್, ಉದ್ಯಮಿ ಕೆ. ವೆಂಕಟೇಶ್ ಕಿಣಿ, ಗೋಳಿಹೊಳೆ ಗ್ರಾ. ಪಂ. ಸದಸ್ಯ ವಸಂತ ಹೆಗ್ಡೆ, ಬಿಎಸ್‌ಎನ್‌ಡಿಪಿ ರಾಜ್ಯಾಧ್ಯಕ್ಷ ಸಾಯಿದತ್ತಿ ಗುತ್ತೆದಾರ್, ಉದ್ಯಮಿ ಗುರುರಾಜ ಪಂಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

    ಮತ್ಸ್ಯಬಂಧನ ಪ್ರೈ.ಲಿನ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕ ಅರುಣ್ ಧನಪಾಲ್ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು, ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು.

    ಸಭಾ ಕಾರ್ಯಕ್ರಮಕ್ಕೂ ಮೊದಲು ಮಿಮಿಕ್ರಿ ಕಲಾವಿದ ಸಂತೋಷ್ ಕುಂದೇಶ್ವರ ಅವರಿಂದ ಹಾಸ್ಯ ಕಾರ್ಯಕ್ರಮ, ಗಾಯಕಿ ಗೀತಾ ಪೂಜಾರಿ ಬೈಂದೂರು ಇವರಿಂದ ಸುಗಮ ಸಂಗೀತ ನಡೆಯಿತು.

    ಇದನ್ನೂ ಓದಿ
    ► ರಾಜ್ಯಕ್ಕೆ ಹಾಗೂ ಎಲ್ಲರಿಗೂ ಹಿತವಾಗುವ ಬಜೆಟ್ ಮಂಡಿಸುತ್ತೇನೆ: ಸಿಎಂ ಬಿಎಸ್‌ವೈ – https://kundapraa.com/?p=44271 .

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ವೃದ್ಧೆ ನಾಪತ್ತೆ

    19/12/2025

    ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ

    18/12/2025

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ

    18/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ವೃದ್ಧೆ ನಾಪತ್ತೆ
    • ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ಸಾಗಾಣಿಕ ವಾಹನಗಳ ಓವರ್ ಲೋಡ್ ನಿರ್ಧಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.