ಹೆಮ್ಮಾಡಿ ಜನತಾ ಫ್ರೌಢಶಾಲೆ: ಇಂಟರ‍್ಯಾಕ್ಟ್ ಪದಪ್ರದಾನ

Call us

Call us

Call us

ಕುಂದಾಪುರ: ವಿದ್ಯಾರ್ಜನೆ ವಿದ್ಯಾರ್ಥಿಗಳ ಪರಮ ಗುರಿಯಾಗಿರಬೇಕು ಅದರೊಂದಿಗೆ ಇಂಟರ‍್ಯಾಕ್ಟ್‌ನಂತಹ ಸಂಸ್ಥೆಯ ಮೂಲಕ ಹೆಚ್ಚಿನ ಕೌಶಲ್ಯ ಹಾಗೂ ಜ್ಞಾನವನ್ನು ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿ ಎಂದು  ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹೇಳಿದರು.

Call us

Click Here

ಅವರು ಅಗಸ್ಟ್ ೦೫ರಂದು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಫ್ರೌಢ ಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಭೂಷಣ್ ನಾಯ್ಕ್, ಕಾರ್ಯದರ್ಶಿ ಶರಣ್ಯ ಅವರಿಗೆ  ಪದಪ್ರದಾನ ನೆರವೇರಿಸಿ ಮಾತನಾಡಿದರು.

ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಭೂಷಣ್ ನಾಯ್ಕ್ ಮಾತನಾಡಿ ಸೇವಾ ಚಟುವಟಿಕೆಗಳನ್ನು ಆಯೋಜಿಸುವ ಜೊತೆಗೆ ಪ್ರಸಕ್ತ ಸಾಲಿನಲ್ಲಿ ಉತ್ತಮ ಇಂಟರ‍್ಯಾಕ್ಟ್ ಕ್ಲಬ್ ಆಗಿಸುವ ನಿಟ್ಟಿನಲ್ಲಿ ಎಲ್ಲ ಸದಸ್ಯರ ಸಹಕಾರ ಕೋರಿದರು. ಹೆಮ್ಮಾಡಿಯ ಜನತಾ ಫ್ರೌಢ ಶಾಲೆಯ ಮುಖ್ಯೋಪಧ್ಯಾಯ ಮೋಹನದಾಸ ಶೆಟ್ಟಿ, ಇಂಟರ‍್ಯಾಕ್ಟ್ ಕ್ಲಬ್ ಛೇರ್‌ಮೆನ್ ವೆಂಕಟೇಶ ಪ್ರಭು, ಆನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷೆ ಭಾರತಿ ಪ್ರಕಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಸುನೇತ್ರಾ ಸತೀಶ್ ಕೋಟ್ಯಾನ್, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಇಂಟರ‍್ಯಾಕ್ಟ್ ಕ್ಲಬ್ ಕೋ-ಆರ್ಡಿನೇಟರ್ ಜಗದೀಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಇಂಟರ‍್ಯಾಕ್ಟ್ ಕ್ಲಬ್ ಕಾರ್ಯದರ್ಶಿ ಶರಣ್ಯ ವಂದಿಸಿದರು.

Leave a Reply