ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಂಟ್ವಾಡಿ ಬಾಲ ವಿಕಾಸ ಸಮಿತಿ, ಸ್ತ್ರೀ ಶಕ್ತಿ ಸಂಘಟನೆ, ಸೇನಾಪುರ ಗ್ರಾಮಸ್ಥರ ಆಶ್ರಯದಲ್ಲಿ ಬಂಟ್ವಾಡಿ ನಿವೃತ್ತ ಅಂಗವಾಡಿ ಶಿಕ್ಷಕಿ ಲೀಲಾವತಿ ನಾರಾಯಣ ಹೆಬ್ಬಾರ್ ಅವರಿಗೆ ಇಲ್ಲಿನ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ ನಡೆಯಿತು.
ಸನ್ಮಾನ ಸ್ವಿಕರಿಸಿ ಮಾತನಾಡಿದ ನಿವೃತ್ತ ಬಂಟ್ವಾಡಿ ಅಂಗನವಾಡಿ ಶಿಕ್ಷಕಿ ಲೀಲಾವತಿ ನಾರಾಯಣ ಹೆಬ್ಬಾರ್, ಮಾತೃಭಾಷೆ ಹಾಗೂ ಅಂಗನವಾಡಿಯಲ್ಲಿ ಕಲಿತ ಮಕ್ಕಳು ಜೀವನದಲ್ಲಿ ಎಂದೂ ಸೋಲೋದಿಲ್ಲ. ಮನೆಯ ಮಕ್ಕಳಿಗೆ ತಾಯಿಯಾಗುವ ಭಾಗ್ಯ ಎಲ್ಲರಿಗೂ ಸಿಗುತ್ತಿದ್ದು, ಸಮಾಜದ ಮಕ್ಕಳಿಗೆ ತಾಯಿಯಾಗುವ ಭಾಗ್ಯ ಅಂಗನವಾಡಿ ಕೊಡುತ್ತದೆ. ಯಾವುದೇ ಕೆಲಸವಿರಲಿ ಶ್ರದ್ಧೆ ನಿಷ್ಠೆಯಿಂದ ದುಡಿದರೆ ಸಮಾಜ ಗುರುತಿಸುತ್ತದೆ ಎಂದು ಹೇಳಿದರು.
ಬಂಟ್ವಾಡಿ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಬಿ.ಅರುಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಾವತಿ ಜಗನ್ನಾಥ ಶ್ಯಾನುಭಾಗ್ ಸನ್ಮಾನಿಸಿದರು. ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನಿವೃತ್ತ ಅಂಗನವಾಡಿ ಶಿಕ್ಷಕಿ ಲೀಲಾವತಿ ಅವರಿಗೆ ಉಡಿ ತಂಬಿ ಬಾಗೀನ ನೀಡಿ ಗೌರವಿಸಿದರು. ಆಶಾ ಕಾರ್ಯಕರ್ತೆಯರಾದ, ಪ್ರೇಮಲತಾ ಪೈ, ಮಾಲತಿ ಮೊಗವೀರ ಸನ್ಮಾನಿಸಿದರು.
ಸ್ತ್ರೀ ಶಕ್ತಿ ಸಂಘ ಸದಸ್ಯರಾದ ಸೌಮ್ಯಾ ಪೈ ಪ್ರಾರ್ಥಿಸಿದರು. ಪ್ರೇಮಾ ಬಂಟ್ವಾಡಿ ಸ್ವಾಗತಿಸಿದರು. ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಪ್ರಭಾಕರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಶ್ರೀದೇವಿ ನಿರೂಪಿಸಿದರು. ಸರಿತಾ ಶೆಟ್ಟಿ ವಂದಿಸಿದರು. ಗುಡ್ಡಮ್ಮಾಡಿ ಜಡಿಯರಮನೆ ರೋಹಿಣಿ ಶೆಟ್ಟಿ ಹಾಗೂ ಸಂಗಡಿಗರಿಂದ ಜಾನಪದ ಗೀತೆ ಗಾಯನ ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ಗುಡ್ಡಮ್ಮಾಡಿ, ಬಂಟ್ವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ, ಬಂಟ್ವಾಡಿ ಸ್ತ್ರೀ ಶಕ್ತಿ ಸಂಘದ ವಿಕ್ಟೋರಿಯಾ ಒಲಿವೇರಾ ಇದ್ದರು.