ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಪೆಟ್ರೋಲ್ ಬಂಕ್ ಸಮೀಪದ ದೀಪಾ ಕಾಂಪ್ಲೆಕ್ಸ್‌ನ ಮೊದಲನೆ ಮಹಡಿಯಲ್ಲಿ ಫೆ. 17ರ ಬುಧವಾರ ‘ಸ್ಪೀಡ್ ಮೊಬೈಲ್’ ಮಳಿಗೆ ಶುಭಾರಂಭಗೊಳ್ಳಲಿದೆ.
ಸ್ಪೀಡ್ ಮೊಬೈಲ್ ಮಳಿಗೆಯು ಉಡುಪಿ ಜಿಲ್ಲೆಯಲ್ಲಿ ಕಳೆದ 7 ವರ್ಷಗಳಿಂದ ಮೊಬೈಲ್ ಮತ್ತು ಮೊಬೈಲ್ ಬಿಡಿಭಾಗಗಳ ಮಾರಾಟದಲ್ಲಿ ಉತ್ಕೃಷ್ಟ ಹಾಗೂ ತ್ವರಿತ ಸೇವೆ, ಉತ್ತಮ ಗುಣಮಟ್ಟ, ಸ್ಪರ್ಧಾತ್ಮಕ ಬೆಲೆ ನೀಡಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದೆ. ಕುಂದಾಪುರದಲ್ಲಿ ಮೂರು ಶಾಖೆಗಳು, ಸಾಲಿಗ್ರಾಮ ಉಡುಪಿ, ಗಂಗೊಳ್ಳಿ, ನಾವುಂದ, ತೀರ್ಥಹಳ್ಳಿಯಲ್ಲಿ ಶಾಖೆಗಳನ್ನು ಹೊಂದಿರುವ ಸಂಸ್ಥೆಯು ಇದೀಗ ಬೈಂದೂರಿನಲ್ಲಿ ನೂತನ ಶಾಖೆಯನ್ನು ತೆರೆಯುತ್ತಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಿಡಬ್ಲ್ಯು ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಕಟ್ಟಡ ಮಾಲೀಕರಾದ ಎನ್. ಜಗನ್ನಾಥ್ ಶೆಟ್ಟಿ, ಬೈಂದೂರು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷರಾದ ಎಮ್. ಗೋವಿಂದ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಎ. ಕಾಯ್ಕಿಣಿ, ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಬೈಂದೂರು ಜುಮ್ಮಾ ಮಸ್ಜಿದ್ ಖಾಝೀ ಮೊಹಮ್ಮದ್ ಫೈಝಲ್ ಬ್ಯಾರಿ, ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜಯಶೀಲ ಶೆಟ್ಟಿ, ಕುಂದಾಪುರ ನಕ್ಷತ್ರ ಜ್ಯುವೆಲ್ಸ್ ಮಾಲೀಕರಾದ ನವೀನ್ ಹೆಗ್ಡೆ, ಸಿದ್ದಾಪುರ ಯುವ ಸಾಹಿಗಳಾದ ಮುಷ್ತಾಕ್ ಹೆನ್ನಾಬೈಲ್, ಕುಂದಾಪುರ ಲಯನ್ಸ್ ಕೋಸ್ಟಲ್ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಕುಂಜಾಲು ವಿ. ಕೆ. ಆರ್. ಆಚಾರ್ಯ ಮೆಮೋರಿಯಲ್ ಹೈಸ್ಕೂಲ್ ನಿವೃತ್ತ ಅಧ್ಯಾಪಕರಾದ ಭಾಲಗಂಗಾಧರ ಶೆಟ್ಟಿ, ಕುಂದಾಪ್ರ ಡಾಟ್ ಕಾಂ ನ್ಯೂಸ್ ಪೋರ್ಟೆಲ್ ಸಂಪಾದಕರಾದ ಸುನಿಲ್ ಹೆಚ್. ಜಿ. ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.