ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್‌ನಲ್ಲಿ ಸಾಧಕರಿಗೆ ಶನಿವಾರ ಉತ್ತಮ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಶ್ವಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿಗಳಾದ ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಸನಾ ಶೆಟ್ಟಿ (ಡೈಮಂಡ್ ಗ್ರೂಪ್), ಯುರೋ ಆಂಗ್ಲ ಮಾಧ್ಯಮ ಶಾಲೆ ದಾವಣಗೆರೆ ಯ ನಿಶ್ಚಲ್ ಜಿ. ಎಸ್. (ಗೋಲ್ಡನ್ ಗ್ರೂಪ್) ಬ್ರಹ್ಮಾವರ ಲಿಟಲ್ ರಾಕ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಮನನ್ ಶೆಟ್ಟಿ (ಸಿಲ್ವರ್ ಗ್ರೂಪ್) ಅವರುಗಳ ಸತತ ಪರಿಶ್ರಮ ಮತ್ತು ಚೆಸ್ ಆಟದಲ್ಲಿನ ತಲ್ಲೀನತೆಯನ್ನು ಉತ್ತೇಜಿಸುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.