ಮರವಂತೆ ಗ್ರಾ. ಪಂ: ಅಧ್ಯಕ್ಷೆಯಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ಲೋಕೇಶ ಖಾರ್ವಿ ಅವಿರೋಧ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಗ್ರಾಮ ಪಂಚಾಯಿತಿಯಲ್ಲಿ 30 ತಿಂಗಳ ಅವಧಿಗೆ ಅಧ್ಯಕ್ಷೆಯಾಗಿ ಪ್ರಥಮ ಬಾರಿಗೆ ಅನುಸೂಚಿತ ಪಂಗಡದ ಮಹಿಳೆ ರುಕ್ಮಿಣಿ ಮತ್ತು ಉಪಾಧ್ಯಕ್ಷರಾಗಿ ಲೋಕೇಶ ಖಾರ್ವಿ ಅವಿರೋಧವಾಗಿ ಆಯ್ಕೆಯಾದರು.

Call us

Click Here

ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ–ಅಗೆ ಮೀಸಲಾಗಿತ್ತು. ಬುಧವಾರ ಬೈಂದೂರು ವಲಯ ಶಿಕ್ಷಣಾಧಿಕಾರಿ ಜಿ. ಎಂ. ಮುಂದಿನಮನಿ ಆಯ್ಕೆ ಪ್ರಕ್ರಿಯೆ ನಡೆಸಿದರು.ಮರವಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಇದೇ ಮೊದಲ ಬಾರಿಗೆ ಅನುಸೂಚಿತ ಪಂಗಡದ ಮಹಿಳೆಗೆ ಮೀಸಲಾಯಿತು.

ಪ್ರಥಮ ಬಾರಿ ಸದಸ್ಯೆಯಾದ ರುಕ್ಮಿಣಿ ಅವರಿಗೆ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಒಲಿಯಿತು. ಅವರಿಗೆ ಯಾವುದೇ ಪಕ್ಷದ ಬೆಂಬಲ ಪಡೆಯುವ ಅಗತ್ಯ ಉದ್ಭವಿಸಲಿಲ್ಲ. ಆದರೂ ಅವರು ಸಲ್ಲಿಸಿದ ಎರಡು ಪ್ರತ್ಯೇಕ ನಾಮಪತ್ರಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಅನುಮೋದಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಬೆಂಬಲಿಸಿದರು.ಬಿಜೆಪಿ ಬೆಂಬಲಿತ ಲೋಕೇಶ ಖಾರ್ವಿ ಎರಡನೇ ಅವಧಿಗೆ ಸದಸ್ಯರಾಗಿದ್ದಾರೆ. ಇಲ್ಲಿನ 14 ಸ್ಥಾನಗಳಲ್ಲಿ 11 ಬಿಜೆಪಿ ಬೆಂಬಲಿತರು ಮತ್ತು 2 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು.ನಿಕಟಪೂರ್ವ ಅಧ್ಯಕ್ಷೆ ಅನಿತಾ ಆರ್. ಕೆ., ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಸ್. ಜನಾರ್ದನ, ತಾಲ್ಲೂಕು ಕೊರಗ ಸಂಘದ ಅಧ್ಯಕ್ಷ ಗಣೇಶ್ , ಕರುಣಾಕರ ಶೆಟ್ಟಿ ಇದ್ದರು.

Leave a Reply