ಆಳ್ವಾಸ್ ಪತ್ರಿಕೋದ್ಯಮ ವಿಭಾಗದಿಂದ ‘ಮೀಡಿಯಾ ಮಂಥನ್’ ಸಂವಾದ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗವು ‘ಮೀಡಿಯಾ ಮಂಥನ್’ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Call us

Click Here

ವಿದ್ಯಾರ್ಥಿಗಳೊಂದಿಗೆ ನಡೆದ ಈ ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಮೆಲ್ವಿನ್ ಮೆಂಡೋನ್ಸಾ, ಅಲ್ವಿನ್ ಮೆಂಡೋನ್ಸಾ ಹಾಗೂ ಟೈಮ್ಸ್ ಆಫ್ ಇಂಡಿಯಾದ ಹಿರಿಯ ಕರೆಸ್ಪಾಂಡೆಂಟ್ ಆಗಿರುವ ಕೆವಿನ್ ಮೆಂಡೋನ್ಸಾ ಭಾಗವಹಿಸಿದ್ದರು. ಪತ್ರಿಕೋದ್ಯಮದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಪತ್ರಿಕೋದ್ಯಮದ ವಿಸ್ತೃತ ಕಾರ‍್ಯವ್ಯಾಪ್ತಿಯ ಬಗ್ಗೆ ಮಾತನಾಡಿದ ಮೆಲ್ವಿನ್ ಮೆಂಡೋನ್ಸಾ, ‘ಪತ್ರಿಕೋದ್ಯಮವೆಂದರೆ ಕೇವಲ ಬರವಣಿಗೆ, ವರದಿಗಾರಿಕೆಯಲ್ಲ. ಇದನ್ನು ಹೊರತುಪಡಿಸಿದ ವಿಪುಲ ಅವಕಾಶಗಳು ಈ ಕ್ಷೇತ್ರದಲ್ಲಿವೆ. ಡಿಜಿಟಲ್ ಮಾಧ್ಯಮಗಳು, ಸಾರ್ವಜನಿಕ ಸಂಪರ್ಕ, ಈವೆಂಟ್ ಮ್ಯಾನೇಜ್‌ಮೆಂಟ್, ಮೀಡಿಯಾ ಮ್ಯಾನೇಜ್‌ಮೆಂಟ್ ಒಳಗೊಂಡ ವಿಶಿಷ್ಟ ಕಾರ‍್ಯಗಳನ್ನು ಒಬ್ಬ ಪತ್ರಕರ್ತ ಮಾಡಬಹುದು. ವಿದ್ಯಾರ್ಥಿಗಳು ಇಂತಹ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ’ ಎಂದರು.

ಒಬ್ಬ ಪತ್ರಕರ್ತನಿಗಿರಬೇಕಾದ ಕಾನೂನಿನ ಜ್ಞಾನದ ಬಗ್ಗೆ ತಿಳಿಸಿದ ಅಲ್ವಿನ್ ಮೆಂಡೋನ್ಸಾ, ‘ಪತ್ರಿಕೋದ್ಯಮದಲ್ಲಿರುವವರಿಗೆ ಕೆಲವು ಅಗತ್ಯ ಕಾನೂನುಗಳ ಅರಿವಿರಬೇಕು. ಆರ್‌ಟಿಐ, ಪಿಐಎಲ್, ಟ್ರಾನ್ಸ್‌ಪರೆಂಟ್ ಆಕ್ಟ್‌ನಂತಹ ಕಾಯ್ದೆಗಳ ಅರಿವಿರಬೇಕು. ಜೊತೆಗೆ ಅಪರಾಧ, ಕೋರ್ಟ್‌ಕೇಸ್‌ಗಳ ವರದಿಗಾರಿಕೆ ಸಂದರ್ಭದಲ್ಲಿ ತುಂಬಾ ಜಾಗರೂಕರಾಗಿರಬೇಕು. ಒಬ್ಬ ಪತ್ರಕರ್ತನಾಗುವವನಿಗೆ ಪದಬಳಕೆಯ ಮೇಲೆ ಅಪಾರ ಹಿಡಿತವಿರಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹಿರಿಯ ಕರೆಸ್ಪಾಂಡೆಂಟ್ ಕೆವಿನ್ ಮೆಂಡೋನ್ಸಾ ನವ ಮಾಧ್ಯಮಗಳ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ‘ಪ್ರಸ್ತುತ ಡಿಜಿಟಲ್ ಮಾಧ್ಯಮಗಳಲ್ಲಿ ಅಪಾರ ಅವಕಾಶಗಳಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಯೋಚಿಸಬೇಕು. ಡಿಜಿಟಲ್ ವೇದಿಕೆಗಳಲ್ಲಿ ಬರವಣಿಗೆ, ವರದಿಗಾರಿಕೆ, ಫೋಟೋಗ್ರಫಿ, ಎಡಿಟಿಂಗ್, ಪಿಆರ್ ಸೇರಿದಂತೆ ಎಲ್ಲ ಕೌಶಲ್ಯಗಳಿಗೂ ಬೆಲೆಯಿದೆ. ಒಬ್ಬ ವಿದ್ಯಾರ್ಥಿಯು ಈ ವಿಷಯಗಳಲ್ಲಿ ಚೆನ್ನಾಗಿ ಪ್ರಭುತ್ವ ಸಾಧಿಸಿದರೆ ಪತ್ರಿಕೋದ್ಯಮದಲ್ಲಿ ಎತ್ತರಕ್ಕೆ ಬೆಳೆಯಬಹುದು’ ಎಂದು ಅಭಿಪ್ರಾಯ ಪಟ್ಟರು.

Click here

Click here

Click here

Click Here

Call us

Call us

ಈ ವಿಶೇಷ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ವಹಿಸಿಕೊಂಡಿದ್ದರು. ಅಧ್ಯಕ್ಷೀಕಯ ನೆಲೆಯಲ್ಲಿ ಮಾತನಾಡಿದ ಅವರು, ‘ಪತ್ರಿಕೋದ್ಯಮ ತುಂಬಾ ಅವಕಾಶಗಳಿರುವ ಮಹತ್ವದ ಕ್ಷೇತ್ರ. ಇಂದಿನ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ತಮ್ಮನ್ನು ಸರಿಯಾದ ರೀತಿಯಲ್ಲಿ ತೊಡಗಿಸಿಕೊಳ್ಳುವ ಅಗತ್ಯತೆ ಇದೆ. ಸಂಶೋಧನೆ ಮತ್ತು ಆಳವಾದ ಓದು – ಅಭ್ಯಾಸಗಳು ಯಾವುದೇ ವಿಷಯದ ಬಗ್ಗೆ ಬರೆಯಲು, ಚರ್ಚಿಸಲು ಒಬ್ಬ ಪತ್ರಕರ್ತನಿಗೆ ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ಈ ನಿಟ್ಟಿನಲ್ಲಿ ಕಾರ‍್ಯಪ್ರವೃತ್ತರಾಗಬೇಕು’ ಎಂದು ಹೇಳಿದರು.
ಸಂವಾದದಲ್ಲಿ ಪತ್ರಿಕೋದ್ಯಮದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಯಿತು. ಪತ್ರಿಕೋದ್ಯಮ ಪಠ್ಯಗಳ ಅನ್ವಯಿಕತೆ, ತನಿಖಾ ಪತ್ರಿಕೋದ್ಯಮ, ಸ್ಟಿಂಗ್ ಆಪರೇಷನ್‌ಗಳು, ಸುದ್ದಿ ಮೂಲಗಳು, ಪತ್ರಿಕೋದ್ಯಮದ ನೀತಿ ಸಂಹಿತೆ, ಪತ್ರಕರ್ತನ ವೃತ್ತಿ ಜೀವನದಲ್ಲಿ ಬರಬಹುದಾದ ಸವಾಲುಗಳು, ಮಾನನಷ್ಟ ಮೊಕದ್ದಮೆ, ಎಲೆಕ್ಷನ್ ವರದಿಗಾರಿಕೆ ಹಾಗೂ ಎಕ್ಸಿಟ್ ಪೋಲ್ ವಿಶ್ಲೇಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಂತೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply