ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಸಹಾಯಕ ಕಮೀಷನರ್ ರಾಜು ಕೆ. ಅವರು ಭೇಟಿ ನೀಡಿದರು. ಥೀಮ್ ಪಾರ್ಕ್‌ಗೆ ಆಗಮಿಸುವ ರಸ್ತೆಯ ಸಮಸ್ಯೆಯ ಬಗ್ಗೆ ವೀಕ್ಷಿಸಿದರು.
ನಂತರ ಕಾರಂತ ಥೀಮ್ ಪಾರ್ಕ್‌ನಲ್ಲಿ ಕಾರಂತರ ಪುತ್ಥಳಿ, ನೂತನವಾಗಿ ನಿರ್ಮಾಣವಾಗುತ್ತಿರುವ ಸಂಗೀತ ಕಾರಂಜಿ ಬಗ್ಗೆ ಮಾಹಿತಿ ಪಡೆದುಕೊಂಡರು. ಅಂಗನವಾಡಿ, ಗ್ರಂಥಾಲಯ, ರಂಗಮಂದಿರ, ಆರ್ಟ್‌ಗ್ಯಾಲರಿ, ವೀಕ್ಷಿಸಿದರು. ಕಾರಂತರ ಕಾದಂಬರಿಗಳ ಪಾತ್ರಗಳು ನಮ್ಮೊಳಗಿನ ವ್ಯಕ್ತಿಯ ಚಿತ್ರಣಗಳು ಅನಾವರಣಗೊಳ್ಳುವಂತೆ ಭಾಸವಾಗುವುದಲ್ಲದೇ, ಸಮಾಜದಲ್ಲಿನ ಸಮಸ್ಯೆಗಳನ್ನು ಕಾದಂಬರಿ ಮೂಲಕ ಓದುಗರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ವಾಸು ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ಎಸ್ ಪೂಜಾರಿ, ಕೋಟ ಕಂದಾಯ ನಿರೀಕ್ಷಕರಾದ ರಾಜು, ಗ್ರಾಮ ಲೆಕ್ಕಾಧಿಕಾರಿ ಚೆಲುವರಾಜ್, ಕೋಟ ಹೋಬಳಿಯ ಕೃಷಿ ಅಧಿಕಾರಿ ಸುಪ್ರಭಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.