ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಜನರು ತಮ್ಮ ನಿಯಂತ್ರಣ ಕಳೆದುಕೊಂಡರೆ, ಇಡೀ ಜಗತು ಜನರನ್ನು ನಿಯಂತ್ರಿಸುತ್ತದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.
ಅವರು ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಫೋರಂಡೇ ‘ಇನಾಮು-2021’ನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸುತ್ತಲಿನ ಸುಂದರ ವಾತಾವರಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಸಂದರ್ಭಗಳಿಗೆ ಹೆದರದೆ ಅದನ್ನು ಎದುರಿಸುವ ಛಲ ನಮ್ಮಲ್ಲಿರಬೇಕು. ನಮ್ಮನ್ನು ನಾವು ಬೆಳೆಸಿಕೊಳ್ಳಲು ಎಲ್ಲರೊಂದಿಗೆ ಬೆರೆಯುವ ಮನಸ್ಥಿತಿ ಬೆಳೆಯಬೇಕು ಎಂದರು
ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ಫೋರಂಗಳ ಸಾಂಸ್ಕೃತಿಕ ವೈವಿಧ್ಯ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಇಂಟರ್-ಫೋರಂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿವಿಧ 22 ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಎನ್‌ಸಿಸಿ ಫೋರಂ ಸಮಗ್ರ ಚಾಂಪಿಯನ್‌ಶಿಪ್‌ಗೆ ಪಾತ್ರವಾಯಿತು. ದ್ವಿತೀಯ ಪ್ರಶಸ್ತಿಯನ್ನು ಕಾಮರ್ಸ್ ಫೋರಂ ಹಾಗೂ ತೃತೀಯ ಪ್ರಶಸ್ತಿಯನ್ನು ಮಾನವಿಕ ಫೋರಂ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಫೋರಂ ಸಂಯೋಜಕಡಾ. ಯೋಗೀಶ್ ಕೈರೋಡಿ, ಉಪನ್ಯಾಸಕರಾದ ಹರಿಣಾಕ್ಷಿ ಹಾಗೂ ಮನು ಉಪಸ್ಥಿತರಿದ್ದರು. ವಿದ್ಯಾರ್ಥಿ ಸುಮಂತ್ ಪೂಜಾರಿ ಸ್ವಾಗತಿಸಿದರು, ಅಕ್ಷಯ್‌ಕುಮಾರ್ ವಂದಿಸಿ, ವಿದ್ಯಾರ್ಥಿನಿ ಶರಣ್ಯ ನಿರೂಪಿಸಿದರು.