ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಗೀತವನ್ನು ಆಸ್ವಾದಿಸುವ ಹವ್ಯಾಸವಿದ್ದರೆ ಧೀರ್ಘಾವಧಿಯಲ್ಲಿ ಗುಣವಾಗಬೇಕಾದ ಕಾಯಿಲೆಗಳು ಅಲ್ಪಾವಧಿಯಲ್ಲಿ ಗುಣವಾಗುತ್ತದೆ. ಹಾಗಾಗಿ ಸಂಗೀತವೆನ್ನುವುದು ಸಕಲ ಕಾಯಿಲೆಗೂ ಮದ್ದು ಎಂದು ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಅವರು ಕಲಾಕ್ಷೇತ್ರ ಕುಂದಾಪುರ ವತಿಯಿಂದ ಹಮ್ಮಿಕೊಳ್ಳಲಾದ ಆಹ್ವಾನಿತ ಹವ್ಯಾಸಿ ಹಾಡುಗಾರರ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಾಕ್ಷೇತ್ರ ಕುಂದಾಪುರ ಕಛೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೀರ್ಮಾನಕಾರರಾಗಿ ಹಿರಿಯ ಕಲಾವಿದ ಬಸ್ರೂರು ಭಾಸ್ಕರ ಆಚಾರ್ಯ ಹಾಗೂ ಚೇಂಪಿಯ ವೆಂಕಟೇಶ್ ಭಟ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದಂತ ವೈದ್ಯರಾದ ಡಾ. ರಾಜಾರಾಮ್ ಶೆಟ್ಟಿ, ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಮತ್ತು ಸದಸ್ಯರಾದ ಪ್ರವೀಣ್ ಕುಮಾರ್ ಟಿ. ದಾಮೋದರ್ ಪೈ, ರಾಜೇಶ್ ಕಾವೇರಿ, ಶ್ರೀಧರ್ ಸುವರ್ಣ, ಸಾಯಿನಾಥ್ ಶೇಟ್, ರಾಮಚಂದ್ರ ಬಿ.ಎನ್ ಹಾಗೂ ಡಾ. ಹರಿಪ್ರಸಾದ್ ಶೆಟ್ಟಿ ಹಿರಿಯರಾದ ಮೋಹನ್ ಸಾರಂಗ್, ಭವಾನಿ ಗಂಗಾಧರ್, ಜಯಂತಿ ಸಾಲಿಗ್ರಾಮ, ಪ್ರಕಾಶ್ಚಂದ್ರ ಹೆಗ್ಡೆ, ರಮೇಶ್ ಬಿ. ಶೇಖರ್ ಕೆ.ಜಿ, ಶಂಕರನಾರಾಯಣ , ಪ್ರಶಾಂತ ಸಾರಂಗ್ ಉಪಸ್ಥಿತರಿದ್ದರು.