ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ದಿನನಿತ್ಯ ಬದುಕಿನ ಜಂಜಾಟದಲ್ಲಿ ಸಿಲುಕುವ ನಮಗೆ ಕ್ರೀಡೆಗಳಿಂದ ಮಾನಸಿಕ ನೆಮ್ಮದಿ ದೊರಕುತ್ತದೆ, ಯುವಕ ಮಂಡಲವು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು , ಈ ನಿಟ್ಟಿನಲ್ಲಿ ಶ್ರೀವಿನಾಯಕ ಯುವಕ ಮಂಡಲವು ಸಾಂಸ್ಕೃತಿಕ-ಸಾಹಿತ್ಯಿಕ ಕಾರ್ಯಕ್ರಮದ ಜೊತೆ ಸಾಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾಬ್ರಕಟ್ಟೆ-ಯಡ್ತಾಡಿ ಇವರ ಆಶ್ರಯದಲ್ಲಿ ದಿ. ವೈ ಕೃಷ್ಣ ಪೂಜಾರಿ ಅವರ ಸ್ಮರಣಾರ್ಥ ಹಾಗೂ ದಶಮಾನೋತ್ಸವ ಸಂಭ್ರಮ ತಿಂಗಳ ತಿರುಳು ಅಂಗವಾಗಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಶ್ರೀ ಕೃಷ್ಣ ಟ್ರೋಫಿ-2021 ( ನೆನಪಿನ ತಿರುಗಣಿ ) ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಪಂದ್ಯಾಕೂಟದಲ್ಲಿ 40ತಂಡಗಳು ಭಾಗವಹಿಸಿ ಸಿ.ಎಫ್.ಕೆ ಫ್ರೆಂಡ್ಸ್ ಸಾಬ್ರಕಟ್ಟೆ ತಂಡ ಪ್ರಥಮ ಪ್ರಶಸ್ತಿ ಗೆದ್ದು ,ಎಚ್.ಎಫ್.ಸಿ ಹೊನ್ನಾಳ ತಂಡವು ದ್ವಿತೀಯ ಪ್ರಶಸ್ತಿ ಗೆದ್ದುಕೊಂಡಿತು.
ಯಡ್ತಾಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಅಲ್ತಾರು ನಿರಂಜನ ಹೆಗ್ಡೆ ಅವರು ಮಾತನಾಡಿ, ಸಮಾಜದ ಅಭಿವೃದ್ಧಿಗೆ ಯುವಕರು ಒಂದುಗೂಡಿ ಶ್ರಮಿಸಿ ತಮ್ಮ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಸಹಾಯಕ ವಿವೇಕ್ ಅಮೀನ್, ಯಡ್ತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಯಡ್ತಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಮೃತ್ ಪೂಜಾರಿ, ಸವಿತಾ ದೇವಾಡಿಗ, ವಿನಾಯಕ ಯುವಕ ಮಂಡಲದ ಅಧ್ಯಕ್ಷ ರತ್ನಾಕರ ಪೂಜಾರಿ, ಉದ್ಯಮಿ ಈಶ್ವರ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಶೋಕ್ ಪೂಜಾರಿ ನಿರೂಪಿಸಿ, ಸದಸ್ಯ ಅಜಿತ್ ಕುಮಾರ್ ವಂದಿಸಿದರು.