ಪಡಿತರ ಅಕ್ಕಿ ಅಕ್ರಮ ಖರೀದಿ: ಸೊತ್ತು ಸಹಿತ ಓರ್ವನ ಬಂಧನ

Call us

Call us

Call us

ಬೈಂದೂರು: ಕೆ.ಜಿಗೆ ಒಂದು ರೂಪಾಯಿಯ ಬಹುಕೋಟಿ ಅನುದಾನದ ಯೋಜನೆ ಹಳ್ಳ ಹಿಡಿಯುತ್ತಿರುವುದಕ್ಕೆ ಕರಾವಳಿ ತೀರ ಕುಂದಾಪುರವೂ ಹೊರತಾಗಿಲ್ಲ ಎನ್ನುವದಕ್ಕೆ ಸಾಕ್ಷಿ ದೊರಕಿದಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಕೆ.ಜಿಗೆ ಒಂದು ರೂಪಾಯಿ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದರೂ ಇಲಾಖೆಗಳು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲಮೀ ಬಗ್ಗೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಸರ್ಕಾರದ ಯೋಜನೆ ಈ ರೀತಿ ದುರುಪಯೋಗವಾಗುತ್ತಿರುವುದರ ಬಗ್ಗೆ ತಲೆಕೆಡಿಸಿಕೊಳ್ಳದಿರುವ ನಡುವೆಯೇ ಪಡಿತರ ಅಕ್ಕಿ ಸೌಲಭ್ಯವನ್ನು ಪಡೆಯುತ್ತಿರುವ ಫಲಾನುಭವಿಗಳಿಂದ ಅಕ್ರಮವಾಗಿ ಅಕ್ಕಿ ಖರೀದಿಸಿ ದಂಧೆ ನಡೆಸುತ್ತಿರುವ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಬಂಧಿಸಿ ಖರೀದಿಸಲಾದ ಅಕ್ಕಿ ಸಮೇತ ವಾಹನವನ್ನು ವಶಪಡಿಸಿಕೊಂಡ ಘಟನೆ ಉಪ್ಪುಂದದ ಜನತಾ ಕಾಲೋನಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಬಂಧಿತ ಆರೋಪಿಯನ್ನು ಓಮ್ನಿ ಚಾಲಕ ಕುಂದಾಪುರ ಮೂಲದ ಮಹಮ್ಮದ್ ನಾಸೀರ್(34) ಎಂದು ಗುರುತಿಸಲಾಗಿದ್ದು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

Call us

Click Here

ಘಟನೆಯ ವಿವರ: ಆರೋಪಿ ಮಹಮ್ಮದ್ ನಾಸೀರ್ ಇತರ ಇಬ್ಬರ ಜೊತೆಗೆ ಪ್ರತೀ ಹದಿನೈದು ದಿನಗಳಿಗೊಮ್ಮೆ ಉಪ್ಪುಂದ ಹಾಗೂ ಇತರೆಡೆಗಳಲ್ಲಿ ಪಡಿತರ ಚೀಟಿ ಫಲಾನುಭವಿಗಳಿಗೆ ದೊರೆಯುತ್ತಿದ್ದ ಅಕ್ಕಿಯನ್ನು ಪ್ರತೀ ಕಿಲೋವೊಂದಕ್ಕೆ ೧೧ ರೂಪಾಯಿಗಳಂತೆ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ದೂರು ಹೋಗಿದ್ದು, ಅಕ್ಕಿ ಅಕ್ರಮ ಖರೀದಿಯ ಮೇಲೆ ಕಣ್ಣಿಡುವಂತೆ ಪೊಲೀಸ್ ಇಲಾಖೆ ಹಾಗೂ ಆಹಾರ ಮತ್ತು ನಾಗರೀಕ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದರೆನ್ನಲಾಗಿದೆ. ಬುಧವಾರ ಮತ್ತೆ ಆರೋಪಿಗಳು ಅಕ್ಕಿ ಖರೀದಿ ಮಾಡುತ್ತಿರುವ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಕುಂದಾಪುರ ಆಹಾರ ಮತ್ತು ನಾಗರೀಕ ಪೂರೈಕೆ ನಿರೀಕ್ಷಕರು ತಮ್ಮ ತಂಡದೊಂದಿಗೆ ಬೈಂದೂರು ಪೊಲೀಸರ ಸಹಾಯ ಪಡೆದು ದಾಳಿ ನಡೆಸಿದ್ದಾರೆ.

ಈ ಸಂದರ್ಭ ಆರೋಪಿ ಮಹಮ್ಮದ್ ನಾಸೀರ್ ಹಾಗೂ ಇತರ ಇಬ್ಬರು ಆರೋಪಿಗಳು ಸುಮಾರು ೮೮೩ ಕೆ.ಜಿ. ಬಿಳಿ ಅಕ್ಕಿಯನ್ನು ಓಮ್ನಿ ವಾಹನದಲ್ಲಿ ತುಂಬಿಸಿಡಲಾಗಿದ್ದು, ವಾಹನ ಸಮೇತ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಮಹಮ್ಮದ್ ನಾಸೀರ್‌ನನ್ನು ಬಂಧಿಸಿದ್ದಾರೆ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಬಂಧಿತ ಆರೋಪಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply