ಸಣ್ಣ ಪತ್ರಿಕೆ, ವೆಬ್ ಪೋರ್ಟೆಲ್‌ಗಳೇ ಭವಿಷ್ಯದ ಭರವಸೆ: ದಿನೇಶ್ ಅಮೀನ್ ಮಟ್ಟು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಹುಪಾಲು ಮುಖ್ಯವಾಹಿನಿ ಮಾಧ್ಯಮಗಳು ಪಕ್ಷಪಾತದ ವರದಿಯ ಮೂಲಕ ಜನರ ದಾರಿತಪ್ಪಿಸುತ್ತಿರುವ ಈ ಸಂಧರ್ಭದಲ್ಲಿ ಪರ್ಯಾಯ ಪತ್ರಿಕೋದ್ಯಮದ ಅಗತ್ಯವಿದ್ದು, ಸಣ್ಣ ಪತ್ರಿಕೆಗಳು ಹಾಗೂ ವೆಬ್ ಪೋರ್ಟೆಲ್‌ಗಳು
ಜನರಿಗೆ ಸತ್ಯ ಹೇಳುವ ಕಾರ್ಯವನ್ನು ನಿರ್ಭೀತವಾಗಿ ಮಾಡುತ್ತಿವೆ. ಅವುಗಳೇ ಭವಿಷ್ಯದ ಭರವಸೆ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು.

Call us

Click Here

ಅವರು ಇಲ್ಲಿನ ಕಲಾ ಮಂದಿರದಲ್ಲಿ  ನಡೆದ ಕನ್ನಡ ಮೀಡಿಯಾ ಡಾಟ್ ಕಾಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಾಂಚನ ಬಿಡುಗಡೆಗೊಳಿಸಿ ಮಾತನಾಡಿ ದೆಹಲಿಯ ರೈತ ಚಳುವಳಿ ಜೀವಂತವಾಗಿರಲು ಈ ಪರ್ಯಾಯ ಪತ್ರಿಕೋದ್ಯಮವೇ ಪ್ರಮುಖ ಕಾರಣ. ಹಾಗಾಗಿಯೇ ರೈತ ಚಳುವಳಿ ಜನಸಾಮಾನ್ಯರನ್ನೂ ತಲುಪುವಂತಾಯಿತು ಎಂದರು. ಜನರೇ ಮಾಧ್ಯಮವಾಗಿರುವ ಸಂದರ್ಭದಲ್ಲಿ ಸತ್ಯ ಹೇಳುವ ಪರ್ಯಾಯ ಮಾಧ್ಯಮಗಳ ಬಗ್ಗೆ ಭರವಸೆ ಇಟ್ಟು ಬೆಂಬಲಿಸುವ ಕೆಲಸವನ್ನು ಮಾಡಬೇಕಿದೆ ಎಂದರು.

ಖ್ಯಾತ ನ್ಯಾಯವಾದಿ, ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ, ಹೋರಾಟಗಾರ, ವಾಗ್ಮಿ ನಿಕೇತ್ ರಾಜ್ ಮೌರ್ಯ ಉಪಸ್ಥಿತರಿದ್ದರು.

ಕನ್ನಡ ಮೀಡಿಯಾ ಡಾಟ್ ಕಾಮ್‌ನ ಪ್ರಧಾನ ಸಂಪಾದಕ ಚಂದ್ರಶೇಖರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply