ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ , ಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರೆ ಸಂಪನ್ನಗೊಂಡಿತು.
ವೇದಮೂರ್ತಿ ಶಾರ್ಕೆ ರಾಮಕೃಷ್ಣ ಭಟ್ ನೇತೃತ್ವದಲ್ಲಿ ಪಂಚವಿಂಶತಿ, ಕಲಶ ಸ್ಥಾಪನೆ , ಪರಿವಾರಕ್ಕೆ ಕಲಶ, ಅಧಿವಾಸ ಹೋಮ, ಕಲಾತತ್ವ ಹೋಮ ಮತ್ತು ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಅದೇ ದಿನ ಮದ್ಯಾಹ್ನ 2.30ರಿಂದ ಯಕ್ಷಗಾನ ತಾಳಮದ್ದಲೆ ರಾವಣ ಮೋಕ್ಷ ಕಾರ್ಯಕ್ರಮ ಸಂಜೆ 7 ಗಂಟೆಯಿಂದ ಶ್ರೀ ರಾಘವೇಂದ್ರ ಭಜನಾ ಮಂಡಳಿ ವಂಡ್ಸೆಯ ತಂಡದಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8.30 ಕ್ಕೆ ರಂಗಪೂಜೆ ನಡೆಯಿತು.