ಕಮಲಶಿಲೆ ಪಾರೆಯಲ್ಲಿ ಗಮನಸೆಳೆಯುತ್ತಿರುವ ಕಡವೆ ಕಲಾಕೃತಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಮಲಶಿಲೆ ಪಾರೆಯಲ್ಲಿ ಕಲಾವಿದ ಚೇತನ್ ಕುಮಾರ್ ಹಳ್ಳಿಹೊಳೆ ನಿರ್ಮಿಸಿರುವ ಶಬ್ದ ಗ್ರಹಿಸುವಿಕೆಯ ಭಂಗಿಯ ಕಬ್ಬಿಣದ ಕಡವೆ ಕಲಾಕೃತಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

Call us

Click Here

ಕಮಲಶಿಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಪಾರೆಯಲ್ಲಿ ನಿರ್ಮಿಸಲಾಗಿರುವ ಸುಮಾರು ಹತ್ತು ಅಡಿ ಎತ್ತರ ಹಾಗೂ ನಾಲ್ಕೂವರೆ ಅಡಿ ಅಗರ ಕಡವೆ ಕಲಾಕೃತಿಯನ್ನು ಕಲಾವಿದ ಚೇತನ್ ಐದು ದಿನದಲ್ಲಿ ನಿರ್ಮಿಸಿದ್ದು, ವೆಲ್ಡರ್ ಅಶೋಕ್ ಕುಲಾಲ್ ಅವರ ಸಹಕಾರ ಪಡೆದುಕೊಂಡಿದ್ದಾರೆ. ಕಲಾಕೃತಿ ನಿರ್ಮಾಣಕ್ಕೆ 14 ಲೆಂಥ್ ಕಬ್ಬಿಣದ ರಾಡ್ ಹಾಗೂ ಬೇಸ್’ಗೆ ಒಂದು ಇಂಚ್ ಅಗಲದ ಒಂದು ಲೆಂಥ್ ಕಬ್ಬಿಣ ಬಳಸಲಾಗಿದೆ.

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾದ ಚೇತನ್ ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಹಲವು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದರು. ಇತ್ತಿಚಿಗೆ ಹಳ್ಳೆಹೊಳೆಗೆ ತೆರಳುವ ಮಾರ್ಗದಲ್ಲಿ ರಚಿಸಿದ್ದ ಮಂಡೂಕದ ಕಲಾಕೃತಿಯೂ ಗಮನ ಸೆಳೆದಿತ್ತು.

Leave a Reply