ಮಾತೃಭಾಷೆಯಿಂದ ವ್ಯಕ್ತಿಯ ವಿಕಾಸ ಸಾಧ್ಯ: ಟಿ. ಎ. ಎನ್. ಖಂಡಿಗೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಮಾತೃಭಾಷೆಯಿಂದ ವ್ಯಕ್ತಿಯ ವಿಕಾಸ ಸಾಧ್ಯ. ವ್ಯಕ್ತಿಯಲ್ಲಿರುವ ಆತ್ಮಜ್ಞಾನ ವಿಶಿಷ್ಟವಾದದ್ದು. ಅದನ್ನು ಬೇರೆಯವರು ಅಪಹರಿಸಲು ಸಾಧ್ಯವಿಲ್ಲ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಟಿ. ಎ. ಎನ್. ಖಂಡಿಗೆ ಹೇಳಿದರು.

Call us

Click Here

ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘ ಹಾಗೂ ಲಲಿತಕಲಾ ಸಂಘದ ವತಿಯಿಂದ ನಡೆದ ಕಲಾಕಿರಣ- 2021ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆತ್ಮಜ್ಞಾನ ಮತ್ತು ಆತ್ಮಶಕ್ತಿಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಕಂಡುಕೊಳ್ಳಬೇಕಾದದ್ದು ವ್ಯಕ್ತಿಯ ವಿಕಾಸದ ದೃಷ್ಟಿಯಿಂದ ಮಹತ್ವವಾದದ್ದು. ಈ ಜ್ಞಾನಗಳನ್ನು ಮಾತೃಭಾಷೆಯು ಬೆಳೆಸುತ್ತದೆ. ಇಂತಹ ಕೆಲಸಗಳನ್ನು ಸಾಹಿತ್ಯ ಹಾಗೂ ಕಲಾ ಸಂಘಗಳು ಮಾಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ, ಭಾಷೆ ಅಭಿಮಾನವಿರಬೇಕು, ಆದರೆ ಅಂಧಾಭಿಮಾನವಿರಬಾರದು. ಯಾವುದೇ ಭಾ?ಯಾದರೂ ಅದು ವ್ಯಕ್ತಿಯ ಭಾವ ಬುದ್ಧಿಯನ್ನು ವಿಕಾಸಗೊಳಿಸುತ್ತದೆ. ಭಾ?ಗಳ ಬಗ್ಗೆ ಅನಗತ್ಯ ಮಡಿವಂತಿಕೆ ಇರಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆನಾಂಡಿಸ್ ಮಾತನಾಡಿ, ಹೃದಯದಿಂದ ಮಾತನಾಡಲು ಮಾತೃಭಾಷೆ ಬೇಕು. ಮಿದುಳಿನಿಂದ ಮಾತನಾಡಲು ಇಂಗ್ಲೀಷ್ ಬೇಕು. ಯಾವುದೇ ಶಿಕ್ಷಣವಾದರೂ ವಿದ್ಯಾರ್ಥಿಗಳ ಸವಾಂಗೀಣ ಬೆಳವಣಿಗೆಯನ್ನು ಮಾಡಲು ಮಿದುಳಿನೊಂದಿಗೆ ಹೃದಯವೂ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರತಿದಿನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ವಿವಿಧ ವಿಭಾಗಗಳ ಉಪನ್ಯಾಸಕರು, ಸಾಹಿತ್ಯ ಹಾಗೂ ಕಲಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

Leave a Reply