ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯ ಬೆಳ್ವೆ ಗಣೇಶ್ ಕಿಣಿ ರಾಜೀನಾಮೆ ನೀಡಿದ್ದಾರೆ.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಕೊಲ್ಲೂರು ದೇವಳದ ಸಮಿತಿಗೆ ಸದಸ್ಯನಾಗಿ ಆಯ್ಕೆಯಾಗಿದ್ದು ದೇವರ ಸೇವೆಗೆ ಸಿಕ್ಕ ಅವಕಾಶ ಎಂದು ತಿಳಿದುಕೊಂಡಿದ್ದೆ ಆದರೆ ಸಮಿತಿ ರಚನೆಗೊಂಡು 5 ತಿಂಗಳು ಕಳೆದರೂ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಸಮಿತಿಯ ಸಭೆ ನಡೆದಿಲ್ಲ, ಇದು ಖೇದಕರ. ಸಮಿತಿ ರಚನೆಗೊಂಡು ಸೇವೆಗೆ ಈವರೆಗೆ ಅವಕಾಶ ಸಿಗದಿರುದರಿಂದ ಇಂತಹ ವ್ಯವಸ್ಥೆಯಲ್ಲಿ ಮುಂದುವರಿಯುವುದು ಸರಿಯಿಲ್ಲ ಅನಿಸಿತು ಎಂದು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಸಮಾಜಸೇವೆ, ಧಾರ್ಮಿಕ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಬೆಳ್ವೆ ಗಣೇಶ್ ಕಿಣಿಯವರ ಹಠಾತ್ ರಾಜೀನಾಮೆ ಸಂಚಲನ ಮೂಡಿಸಿದೆ. ಕೆಲವೊಬ್ಬರ ಪ್ರತಿಷ್ಠೆಗಾಗಿ ದೇವಳದ ಕಾರ್ಯ ಚಟುವಟಿಕೆ ಕುಂಠಿತಾಗುತ್ತಿದೆ ಎಂಬ ಆರೋಪ ಈಗ ಭುಗಿಲೆದ್ದಿದೆ. ಕಿಣಿಯವರು ರಾಜೀನಾಮೆ ಹಿಂಪಡೆಯುವಂತೆ ಅನೇಕರು ಒತ್ತಡ ಹೇರುತ್ತಿದ್ದರೂ, ಇದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ದೇವರ ಸೇವೆಗೆ ಅವಕಾಶ ಇಲ್ಲದ ಮೇಲೆ ಬರಿದೆ ಹೆಸರಿಗಾಗಿ ಮುಂದುವರೆಯಲು ನಾನು ಬಯಸುದಿಲ್ಲ ಎಂದು ಗಣೇಶ್ ಕಿಣಿ ಅವರು ತಿಳಿಸಿದ್ದಾರೆ.