ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್ – ಅಕ್ಟೋಬರ್ 2020ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಎಂಟು ರ‍್ಯಾಂಕ್‌ಗಳು ದೊರಕಿವೆ.
ವಾಣಿಜ್ಯ ಪದವಿಯಲ್ಲಿ ಯಡ್ತೆರೆಯ ಕುದ್ರಿಸಾಲ್, ವಿಠಲ ಮತ್ತು ಕಾವೇರಿಯವರ ಪುತ್ರಿ ಮಧುಶ್ರೀಗೆ ಎಂಟನೇ ರ‍್ಯಾಂಕ್, ಕಲಾ ಪದವಿಯಲ್ಲಿ ಬಿಜೂರಿನ ಕಂಚಿಕಾನ್ ಶ್ರೀಧರ ಭಟ್ ಮತ್ತು ಕಾತ್ಯಾಯಿನಿ ಭಟ್‌ಯವರ ಪುತ್ರಿ ಕೀರ್ತಿಗೆ ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ವಿಜ್ಞಾನ ಪದವಿಯಲ್ಲಿ ಕುಂದಾಪುರದ ಕುಂಭಾಶಿಯ ಮನೋಹರ್ ಪ್ರಭು ಮತ್ತು ಮಲ್ಲಿಕಾ ಪ್ರಭು ಅವರ ಪುತ್ರಿ ಮೇಘನಾ ಪ್ರಭು ಅವರಿಗೆ ನಾಲ್ಕನೇ ರ‍್ಯಾಂಕ್, ಬಳ್ಕೂರಿನ ಹಾಡಿಮನೆ ಅಣ್ಣಪ್ಪ ಶೇರೆಗಾರ್ ಮತ್ತು ಮಾಲತಿಯವರ ಪುತ್ರಿ ನಾಗರತ್ನ ಅವರಿಗೆ ಐದನೇ ರ‍್ಯಾಂಕ್, ಉಪ್ಪುಂದದ ಅಮ್ಮನವರತೊಪ್ಲಿನ ಸುಧಾಕರ ಗಾಣಿಗ ಮತ್ತು ಮೂಕಾಂಬು ಎಸ್. ಗಾಣಿಗ ಅವರ ಪುತ್ರಿ ಗೌತಮಿ ಗಾಣಿಗ ಅವರಿಗೆ ಒಂಬತ್ತನೆ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕಂಪ್ಯೂಟರ್ ವಿಜ್ಞಾನ ಪದವಿಯಲ್ಲಿ ಹೊಸಂಗಡಿ ಹೆನ್ನಾಬೈಲಿನ ಕೆ. ಎಂ. ಅಶ್ರಫ್ ಮತ್ತು ರುಬಿನಾ ಬಾನು ಅವರ ಪುತ್ರಿ ನಯಿಮಾ ಪರ್ವಿನ್ ಅವರಿಗೆ ಎರಡನೇ ರ‍್ಯಾಂಕ್, ಬಳ್ಕೂರಿನ ನಾರಾಯಣ ಪೂಜಾರಿ ಮತ್ತು ಬೇಬಿ ಅವರ ಪುತ್ರಿ ಪಲ್ಲವಿಗೆ ನಾಲ್ಕನೇ ರ‍್ಯಾಂಕ್, ಹೆಮ್ಮಾಡಿಯ ಹೊಸಮನೆಯ ಮಂಜುನಾಥ್ ದೇವಾಡಿಗ ಮತ್ತು ಸುಶೀಲಾ ಅವರ ಪುತ್ರಿ ದೀಪಾ ಅವರಿಗೆ ಐದನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯವರು ಅಭಿನಂದಿಸಿದ್ದಾರೆ