ಕುಂದಾಪುರ: ವ್ಯಾವಹಾರಿಕವಾಗಿ ಜಿಲ್ಲೆಯನ್ನು ಮೀರಿಸಿ ಬೆಳೆಯುತ್ತಿರುವ ಕುಂದಾಪುರದಲ್ಲಿ ಎರಡು ವರ್ಷಗಳ ಹಿಂದೆ ವಿಶಿಷ್ಟವಾದ ಯುವ ಮೆರಿಡಿಯನ್ ಕನ್ವೆನ್‌ಷನ್ ಹಾಲ್‌ನ್ನು ಲೋಕಾರ್ಪಣೆಗೊಳಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದರು. ಇದೀಗ ಕರ್ನಾಟಕದಲ್ಲಿಯೇ ಮೊದಲನೆಯದೆನ್ನುವಂತಹ ಉತೃಷ್ಟ ದರ್ಜೆಯ ಐಷಾರಾಮಿ ಹೋಟೇಲೊಂದು ಲೋಕಾರ್ಪಣೆಗೊಳಿಸುವ ಮೂಲಕ ವಿಶ್ವ ಮಟ್ಟದಲ್ಲಿ ಶಾಶ್ವತವಾಗಿ ಗುರುತಿಸಿಕೊಳ್ಳುವತ್ತ ಕುಂದಾಪುರದ ಯುವ ಉದ್ಯಮಿಗಳಾದ ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ಬೈಲೂರು ವಿನಯ ಕುಮಾರ್ ಶೆಟ್ಟಿ ಸಹೋದರರು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಹೆಚ್. ಕೆ. ಪಾಟೀಲ್ ಹೇಳಿದರು.
ಅವರು ಕುಂದಾಪುರ ತಾಲೂಕಿನ ಕೋಟೇಶ್ವರದ ಯುವ ಮೆರಿಡಿಯನ ಬೇ ರೆಸಾರ್ಟ್ ಎಂಡ್ ಸ್ಪಾ ಉದ್ಘಾಟಿಸಿದ ಬಳಿಕ ಯುವ ಮೆರಿಡಿಯನ್ ಕನ್ವೆನ್‌ಶನ್ ಸೆಂಟರ್ ಆವರಣದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ. ಕೋಟೇಶ್ವರದಲ್ಲಿ ಬಹಳಷ್ಟು ಕ್ರಾಂತಿಕಾರಕ ಅಭಿವೃದ್ಧಿ ಸಾಗುತ್ತಿದ್ದು, ಕುಂದಾಪುರ ಪುರಸಭಾ ವ್ಯಾಪ್ತಿಗೆ ಕೋಟೇಶ್ವರವನ್ನು ಸೇರ್ಪಡೆಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
’ಮೆರಿಡಿಯನ್ ಬೇ ರಿಸಾರ್ಟ್ ಎಂಡ್ ಸ್ಪಾ’ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಎಮ್.ಆರ್.ಜಿ ಗ್ರೂಪ್‌ನ ಚೇರ್‌ಮೆನ್ ಪ್ರಕಾಶ್ ಶೆಟ್ಟಿ, ರಾಮೀಗ್ರೂಪ್ ಹೋಟೆಲ್ಸ್ ಇಂಡಿಯಾ & ಮಿಡ್ಲ ಈಸ್ಟ್‌ನ ರಾಜ್ ಶೆಟ್ಟಿ, ಮಂಗಳೂರು ಮೆಡಿಸ್ಕ್ಯಾನ್ ಸೆಂಟರ್‌ನ ರೇಡಿಯೋಲೋಜಿಸ್ಟ್ ಡಾ|ನವೀನಚಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತೆಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಡಾ.ಎಂ.ಶಾಂತರಾಮ ಶೆಟ್ಟಿ, ಅಕಾಡೆಮಿ ಆಪ್ ಜನರ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಭಂಡಾರಿ ಫೌಂಡೇಶನ್ ಮಂಗಳೂರು ಇದರ ಮಂಜುನಾಥ ಭಂಡಾರಿ, ಕುಂದಾಪುರದ ಉದ್ಯಮಿ ಪ್ರಕಾಶ್ ಸೋನ್ಸ್, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ, ಮಾಜಿ ಶಾಸಕ ರಘುಪತಿ ಭಟ್, ಬ್ಯಾರೀಸ್ ಗ್ರೂಫ್ ಬೆಂಗಳೂರು ಪ್ರವರ್ತಕ ಸೈಯದ್ ಮಹಮ್ಮದ್ ಬ್ಯಾರಿ, ಸೌಪರ್ಣಿಕ ಟೈಲ್ಸ್ ಕುಂದಾಪುರ ಇದರ ಸುಕುಮಾರ್ ಶೆಟ್ಟಿ, ದುರ್ಗಾಂಬಾ ಮೋಟಾರ್ಸ್ನ ಸದಾನಂದ ಚಾತ್ರ, ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಶೆಟ್ಟಿ, ಸಾಯಿರಾಧಾ ಗ್ರೂಫ್ ಉಡುಪಿ ಇದರ ಮನೋಹರ ಶೆಟ್ಟಿ, ಕಿದಿಯೂರ್ ಹೋಟೆಲ್ ಪ್ರೈ ಲಿನ ಎಂ.ಡಿ.ಭುವನೇಂದ್ರ ಕಿದಿಯೂರ್ ಉಪಸ್ಥಿತರಿದ್ದರು.
ಬಿ.ಉದಯಕುಮಾರ್ ಶೆಟ್ಟಿ ಮತ್ತು ಸಾಧನಾ ಯು.ಶೆಟ್ಟಿ, ಬಿ.ವಿನಯ ಕುಮಾರ್ ಶೆಟ್ಟಿ ಮತ್ತು ವೈಶಾಲಿ ವಿ.ಶೆಟ್ಟಿ, ಎಚ್.ವಿಶ್ವನಾಥ ಶೆಟ್ಟಿ ಮತ್ತು ಪ್ರಪುಲ್ಲ ವಿ.ಶೆಟ್ಟಿ, ಕು.ನಿಷ್ಠಾ ಮತು ಕು.ವೈಷ್ಣವಿ ಅತಿಥಿಗಳನ್ನು ಗೌರವಿಸಿದರು.
ಪತ್ರಕರ್ತ ರಾಜೇಶ್ ಕೆ.ಸಿ.ಸ್ವಾಗತಿಸಿ, ಕಾರ್ಪೊರೇಶನ್ ಬ್ಯಾಂಕ್ ನಿವೃತ್ತ ಜಿ.ಎಂ.ಎಸ್.ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.