ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರ 60ನೆಯ ಕೃತಿ ‘ಹುಲಿಯಪ್ಪ ಮೇಷ್ಟ್ರು ಬಿಡುಗಡೆ ಮಾ.28ರಂದು ಸಂಜೆ 3.30ಕ್ಕೆ ಕುಂದಾಪುರದ ಪಾರಿಜಾತ ಹೋಟೆಲ್ ಸ್ನೇಹಾ ಸಭಾಂಗಣದಲ್ಲಿ ನಡೆಯಲಿದೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿಗಳಾದ ಬೇಳಗೊಡು ರಮೇಶ್ ಭಟ್ ಕೃತಿ ಪರಿಚಯಿಸಲಿದ್ದು, ಎ. ಎಸ್. ಎನ್. ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ,ಡಯಟ್ ಉ.ಪ್ರಾಂಶುಪಾಲ ಅಶೋಕ್ ಕಾಮತ್, ,ಶಿಕ್ಷಣಾಧಿಕಾರಿ ಪದ್ಮನಾಭ, ಸದಾನಂದ ಬೈಂದೂರು ,ಸುಬ್ರಹ್ಮಣ್ಯ ಶೆಟ್ಟಿ ಭಾಗವಹಿಸಲಿದ್ದಾರೆ