ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಅನ್ನಭಾಗ್ಯ ಯೋಜನೆಯಡಿ ದುರ್ಬಲ ಕುಟುಂಬಗಳಿಗೆ ನೀಡುವ ಅಂತ್ಯೋದಯ ಮತ್ತು ಆದ್ಯತಾ (ಬಿಪಿಎಲ್) ಕಾರ್ಡನ್ನು ಆರ್ಥಿಕವಾಗಿ ಸಧೃಡವಾದ ಕೆಲವು ಕುಟುಂಬಗಳು ಆದ್ಯತಾ (ಬಿಪಿಎಲ್) ಕಾರ್ಡ್ ಪಡೆಯುವ ಬಗ್ಗೆ ಮಾನದಂಡವನ್ನು ಉಲ್ಲಂಘಿಸಿ, ಸುಳ್ಳು ಮಾಹಿತಿ ನೀಡಿ, ಅಂತ್ಯೋದಯ ಮತ್ತು ಆದ್ಯತಾ (ಬಿಪಿಎಲ್) ಕಾರ್ಡ್ ಪಡೆದುಕೊಂಡಿರುವುದು ಕಂಡುಬಂದಿದ್ದು, ಅಂತಹ ಅನರ್ಹರು ಪಡೆದಿರುವ ಕಾರ್ಡನ್ನು ಪತ್ತೆಹಚ್ಚಿ ಆದ್ಯತೇತರ ಪಡಿತರ ಚೀಟಿಯನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರ್ಥಿಕವಾಗಿ ಸಧೃಢವಾಗಿರುವ ಕುಟುಂಬಗಳು ಹೊಂದಿರುವ ಕಾರ್ಡನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು ಏಪ್ರಿಲ್ 15 ಕೊನೆಯ ದಿನವಾಗಿದೆ.
ತಪ್ಪಿದಲ್ಲಿ ಸರ್ಕಾರ ನಿಗಧಿಪಡಿಸಿರುವ ಮಾನದಂಡ ವಿರುದ್ಧವಾಗಿ ಪಡೆದಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವುದು ಕಾನೂನು ಬಾಹಿರವಾಗಿದ್ದು, ಅಂತವರ ವಿರುದ್ಧ ಕ್ರಮ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.