ಆಳ್ವಾಸ್‌ನಲ್ಲಿ ಸೈಕ್ಲಿಂಗ್ ಫಾರ್ ಹ್ಯುಮಾನಿಟಿ ವಿಶೇಷ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎಂ.ಕಾಂ. ಹೆಚ್‌ಆರ್‌ಡಿ ವಿಭಾಗದ ವತಿಯಿಂದ ‘ಸೈಕ್ಲಿಂಗ್ ಫಾರ್ ಹ್ಯುಮಾನಿಟಿ’ ವಿಶೇಷ ಕಾರ‍್ಯಕ್ರಮ ನಡೆಯಿತು.

Call us

Click Here

ಸೈಕಲ್ ಸವಾರಿಯ ಮೂಲಕ ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಣಿಪುರ ಮೂಲದ ಸೈಕಲ್ ಸವಾರ ಫಿಲೆಮ್ ರೋಹನ್ ಸಿಂಗ್ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಫಿಲೆಮ್ ರೋಹನ್ ಸಿಂಗ್, ನಾವು ಮಾಡುವ ಕೆಲಸಗಳು ಇತರರ ಮೇಲೆ ಪ್ರಭಾವ ಬೀರುವಂತಿರಬೇಕು. ಯಾವುದೇ ನಿರೀಕ್ಷೆ ಇಲ್ಲದೆ ಇತತರಿಗೆ ಸಹಾಯ ಮಾಡಬೇಕು ಎಂದರು. ತಮ್ಮ ಜೀವನಾನುಭವಗಳನ್ನು ಹಂಚಿಕೊಂಡ ರೋಹನ್ ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಅವುಗಳನ್ನು ಎದುರಿಸಬಹುದಾದ ವಿವಿಧ ಸಾಧ್ಯತೆಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾಳೆ ಏನು ಆಗಬಹುದು ಎಂಬ ಭಯದಲ್ಲಿ ಯಾರು ಇರುತ್ತರೋ ಅವರು ಯಾವುದೇ ಸಾಧನೆ ಮಾಡಲಾರರು. ಆದ್ದರಿಂದ ಪ್ರತಿಯೊಬ್ಬರು ಆ ಚೌಕಟ್ಟಿನಿಂದ ಹೊರಗೆ ಬರಬೇಕು ಸಣ್ಣ ಪುಟ್ಟ ಸಹಾಯ ಮಾಡುವುದರ ಮೂಲಕ ಕೆಲಸ ಪ್ರಾರಂಭಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿ ಜೊನಿಟಾ ಡಿಸೋಜ ಸ್ವಾಗತಿಸಿ, ಮಹಿಮ ವಂದಿಸಿ, ಸ್ಟೆಫಿ ನಿರೂಪಿಸಿದರು.

Click here

Click here

Click here

Click Here

Call us

Call us

ಫಿಲೆಮ್ ರೋಹನ್ ಸಿಂಗ್ ಮಣಿಪುರಿ ಮೂಲದ ಸೈಕಲ್ ಸವಾರರಾಗಿದ್ದು, ದೇಶಾದ್ಯಂತ ಸೈಕಲ್ ಸವಾರಿ ಮಾಡುವ ಮೂಲಕ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಣಿಪುರದ ಬಡ ಜನರಿಗಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ತಮ್ಮದೇ ಟೀ-ಶರ್ಟ್ ತಯಾರಿಸಿ ಮಾರಾಟ ಮಾಡುತ್ತಿರುವ ಇವರು ಅದರಿಂದ ಬಂದ ಹಣದಲ್ಲಿ ನಿರ್ಗತಿಕರಿಗೆ ಆಹಾರ, ವಸತಿ ಒದಗಿಸುವ, ಪರಿಸರ, ಮಾನವೀಯತೆಗಳ ಬಗ್ಗೆ ಜಾಗೃತಿ ಮೂಡಿಸುವ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸೈಕ್ಲಿಂಗ್ ಮೂಲಕ ಜಾಗೃತಿ ಮೂಡಿಸುತ್ತಿರುವ ಇವರು ಇದುವರೆಗೆ ದೇಶದಾದ್ಯಂತ15000 ಕಿ.ಮೀ ಗೂ ಅಧಿಕ ದೂರ ಸಂಚರಿಸಿದ್ದಾರೆ.

ಈ ಬಾರಿ ‘ಫೀಡಿಂಗ್ ದಿ ಹಂಗ್ರಿ’ ಧ್ಯೇಯವನ್ನಿಟ್ಟುಕೊಂಡು ಸೈಕಲ್ ಸವಾರಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಗ್ರಹವಾಗುವ ದೇಣಿಗೆಯ ಮೂಲಕ ನಿರ್ಗತಿಕರು, ವಲಸೆ ಕಾರ್ಮಿಕರನ್ನು ಸಲಹುವ ಉದ್ದೇಶವಿಟ್ಟುಕೊಂಡಿದ್ದಾರೆ. ಮಣಿಪುರದ ಇಂಫಾಲದಿಂದ ತಮ್ಮ ಪಯಣವನ್ನು ಆರಂಭಿಸಿರುವ ಇವರು ದಕ್ಷಿಣಕನ್ನಡದ ಮೂಡುಬಿದಿರೆಯಲ್ಲಿ ಈ ಬಾರಿಯ ಸೈಕಲ್ ಸವಾರಿಯನ್ನು ಕೊನೆಗೊಳಿಸಲಿದ್ದಾರೆ. ಕೊರೊನಾ ಎರಡನೇ ಅಲೆಯ ಕಾರಣದಿಂದ ಅಭಿಯಾನವನ್ನು ಮೊಟಕುಗೊಳಿಸಿದ್ದೇನೆಂದು ಅವರು ತಿಳಿಸಿದ್ದಾರೆ.

Leave a Reply