ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನ್ಯಾನಲ್ ಕೆಡೆಟ್ ಕೋರ್ (ಎನ್‌ಸಿಸಿ) ನಮ್ಮ ದೇಶದ ಒಂದು ಪ್ರಮುಖ ಯುವ ಸಂಘಟನೆ. ಇದನ್ನು ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಪರಿಗಣಿಸಲಾಗಿದೆ. ಇಂದು ದೇಶಾದ್ಯಂತ ಅಸ್ತಿತ್ವದಲ್ಲಿರುವ ಈ ಸಂಘಟನೆಗೆ ಆರು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ ಎಂದು ನಿವೃತ್ತ ಸೈನಿಕರು ಬೈಂದೂರು ಚಂದ್ರಶೇಖರ ನಾವಡರವರು ನುಡಿದರು
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಪ್ರಪ್ರಥಮ ಬಾರಿಗೆ ಆರಂಭಗೊಳ್ಳುತ್ತಿರುವ 6/8 ಎನ್‌ಸಿಸಿ ನೇವಿ ಕರ್ನಾಟಕ ಉಡುಪಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸೇನೆಯ ವಿವಿಧ ಕ್ಷೇತ್ರದಲ್ಲಿ ಯುವ ಪೀಳಿಗೆಗೆ ವಿಪುಲ ಅವಕಾಶಗಳಿದ್ದು ಎನ್‌ಸಿಸಿಯಲ್ಲಿ ಸಿ ಸರ್ಟಿಫಿಕೇಟ್ ಪಡೆಯುವ ಮೂಲಕ ಸೇನೆಯಲ್ಲಿ ನೇರ ಪ್ರವೇಶ ಗಳಿಸಬಹುದು ಎಂದು ವಿವರಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ದೀಪಕ್ ಕುಮಾರ ಶೆಟ್ಟಿ ಮಾತನಾಡಿ, ಕಾಲೇಜಿನ ಮೊಟ್ಟಮೊದಲ ಬಾರಿಗೆ ಆರಂಭಗೊಳ್ಳುತ್ತಿರುವ ಎನ್‌ಸಿಸಿ ನೇವಿ ಘಟಕಕ್ಕೆ ಶುಭಾಶಯವನ್ನು ಕೋರಿ, ವಿದ್ಯಾರ್ಥಿಗಳಿಗೆ ಜೀವನವನ್ನು ರೂಪಿಸುವಲ್ಲಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಇದು ಸುವರ್ಣ ಅವಕಾಶ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ನಡೆಸಲಾಗುವ ಎನ್‌ಸಿಸಿ. ಶಿಬಿರಾರ್ಥಿಯಾಗಿ ಪಾಲ್ಗೊಂಡು ವಿವಿಧ ತರಬೇತಿ ಮತ್ತು ಪರೀಕ್ಷೆಗಳಲ್ಲಿ ಭಾಗವಹಿಸುವುದರಿಂದ ಸೇನೆಯ ಬಗ್ಗೆ ಮಾಹಿತಿ ದೊರೆಯುವುದು ಹಾಗೂ ಸೇನೆಯ ಶಿಸ್ತಿನ ಜೀವನ ನಿಮ್ಮದಾಗುವುದು ಎಂದು ನುಡಿದರು.
ಎನ್‌ಸಿಸಿ. ಘಟಕದ ಸಂಚಾಲಕರಾದ ಮೀನಾಕ್ಷಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ನವೀನ್ ಹೆಚ್ ಜೆ ಸ್ವಾಗತಿಸಿದರು. ವಿದ್ಯಾರ್ಥಿನಿ ಅನುಶ್ರೀ ನಿರೂಪಿಸಿದರು. ವಿದ್ಯಾರ್ಥಿ ರಾಘವೇಂದ್ರ ವಂದಿಸಿದರು.















