ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾರ್ಚ್ 31ರಿಂದ ಎಪ್ರಿಲ್ 4ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆ ಆಯೋಜಿಸಿದ ಕರ್ನಾಟಕ ರಾಜ್ಯ ಮುಕ್ತ ಫಿಡೆ ರೇಟಿಂಗ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕುಂದಾಪುರದ ಕಶ್ವಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿ ಗಳಾದ ನಿಶಾಂತ್ ಡಿಸೋಜಾ ಹಂಗಳೂರು, ಮನನ್ ಶೆಟ್ಟಿ ಕೋಟೇಶ್ವರ, ಸನಾ ಶೆಟ್ಟಿ ಕೋಟೇಶ್ವರ, ಧನ್ವಿ ಪೈ ಕುಂದಾಪುರ ಹಾಗೂ ದಾವಣಗೆರೆಯ ನಿಶ್ಚಲ್.ಜಿ.ಎಸ್ ಭಾಗವಹಿಸಿದ್ದರು.
ನಿಶಾಂತ್ ಡಿಸೋಜಾ ತಮ್ಮ ರೇಟಿಂಗ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದು ಇದರೊಂದಿಗೆ ಫಿಡೆ ರೇಟಿಂಗ್ ಅನ್ನು 30.8 ಹೆಚ್ಚಿಸಿಕೊಂಡರು, ಸನಾ ಶೆಟ್ಟಿ ವಯೋಮಾನದ(U 9)ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರು. ಇತರ ಆಟಗಾರರು ಶ್ರೇಯಾಂಕಿತ ಆಟಗಾರರನ್ನು ಮಣಿಸುವುದರ ಮೂಲಕ ಉತ್ತಮ ಪ್ರದರ್ಶನ ನೀಡಿದರು
ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಶ್ವಿ ಚೆಸ್ ಸ್ಕೂಲ್ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.