ಕುಂದಾಪುರ: ಬಡಾಕೆರೆ ಹಂಗಳೂರು ಶಾಲಾ ವಠಾರದಲ್ಲಿ ಸರಕಾರದಿಂದ ಕೊಡ ಮಾಡಿದ ಉಚಿತ ಸೈಕಲ್ ವಿತರಣಾ ಸಮಾರಂಭದ ಸಭೆಯ ಅಧ್ಯಕ್ಷತೆಯನ್ನು ಹಂಗಳೂರು ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಜಲಜ ಹೆಚ್. ಚೆಂದನ್ ವಹಿಸಿದ್ದರು.
ತಾಲೂಕು ಪಂಚಾಯತ್ ಸದಸ್ಯ ಮಂಜು ಬಿಲ್ಲವ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಮಾಡಿದ ಸೈಕಲನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಹಂಗಳೂರು ಗ್ರಾ.ಪಂ. ಉಪಾಧ್ಯಕ್ಷರಾದ ಸ್ಟೀವನ್, ಸದಸ್ಯರಾದ ಶ್ರೀಮತಿ ಜನೇಟಾ, ಶ್ರೀಮತಿ ಸರೋಜ ಪೂಜಾರ್ತಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ಸಾಧು ಪೂಜಾರ್ತಿ, ಉಪಾಧ್ಯಕ್ಷರಾದ ರಾಮ ದೇವಾಡಿಗ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶಂಕರ ಪೂಜಾರಿ ಸ್ವಾಗತಿಸಿದರು. ಶಾಲಾ ಶಿಕ್ಷಕರು ಹಾರಜರಿದ್ದು, ಶ್ರೀಮತಿ ಶ್ಯಾಮಲ ಶಿಕ್ಷಕಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಮ ಕೆ.ಕೆ. ಕಾರ್ಯಕ್ರಮ ನಿರೂಪಿಸಿದರು.