ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುಲ್ವಾಡಿಯ ಮೆಹರಾಜ್ ಜುಮ್ಮಾ ಮಸೀದಿಯ ನವೀಕೃತ ಮೊದಲ ಮಹಡಿ ಉದ್ಘಾಟನೆ ಕಾರ್ಯಕ್ರಮ ಮತ್ತು 15ನೇ ವಾರ್ಷಿಕ ಸ್ವಲಾತ್ ಮಜ್ಲಿಸ್ ಮತ್ತು ದುವಾ ಹಾಗೂ ಸೌಹಾರ್ದ ಸಮಾವೇಶ ಗುರುವಾರ ನಡೆಯಿತು.
ನವೀಕೃತ ಕಟ್ಟಡವನ್ನು ಉಡುಪಿ ಜಿಲ್ಲಾ ಖಾಝಿ ಬಹುಃ ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ (ಮಾಣಿ ಉಸ್ತಾದ್) ಉದ್ಘಾಟಿಸಿ ಆಶೀರ್ವದಿಸಿದರು.
ಕಥೋಲಿಕ್ ಸಭಾ ಉಡುಪಿ ಪ್ರದೇಶದ ಮಾಜಿ ಅಧ್ಯಕ್ಷ ಎಲ್ರಾಯ್ ಕಿರಣ್ ಕ್ರಾಸ್ಟೊ ಮಾತನಾಡಿ, ಧರ್ಮಗಳ ನಡುವಿನ ಸೌಹಾರ್ದತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ನಮ್ಮ ನಡುವಿನ ಗೋಡೆಗಳ ಕೆಡವಿ ಸೌಹರ್ದತೆಯನ್ನು ಕಾಪಾಡಿಕೊಳ್ಳೋಣ, ಮಾನವೀಯ ಸ್ಪಂದನೆ, ಮನುಷ್ಯತ್ವವನ್ನು ಎತ್ತಿ ಹಿಡಿಯೋಣ ಎಂದರು.
ಬಸ್ರೂರು ನಿವೇದಿತಾ ಪ್ರೌಢಶಾಲೆ ಅಧ್ಯಾಪಕ ದಿನಕರ ಶೆಟ್ಟಿ ಮಾತನಾಡಿ, ನಾವು ಎಲ್ಲರನ್ನು ಮನುಷ್ಯರು ಎಂಬುದಾಗಿ ಪರಿಗಣಿಸಬೇಕು. ಶಾಲೆಯಲ್ಲಿ ಮಗುವೊಂದು ಬಿದ್ದಾಗ ಇನ್ನೊಂದು ಮಗು ಆ ಮಗುವನ್ನು ಎತ್ತುತ್ತದೆ. ಆಗ ಅದು ಜಾತಿ ಕೇಳುವುದಿಲ್ಲ. ಹಾಗೆಯೇ ನಾವು ನಮ್ಮ ಧರ್ಮವನ್ನು ಪಾಲಿಸೋಣ, ನೆರೆಹೊರೆಯವರನ್ನು ಪ್ರೀತಿಸೋಣ ಎಂದ ಅವರು ಒಂದು ಊರಿನಲ್ಲಿ ಶಾಲೆ, ಪ್ರಾರ್ಥನಾ ಮಂದಿರಗಳನ್ನು ಕಂಡಾಗ ಆ ಊರಿನ ಜನರ ಭಾವನೆ ಅರ್ಥವಿಸಿಕೊಳ್ಳಲು ಸಾಧ್ಯವಿದೆ. ಸೌಹಾರ್ಧತೆ-ಸೋದರತೆಯಿಂದ ನಾವೆಲ್ಲ ಬದುಕಬೇಕಾಗಿದೆ ಎಂದರು.
ಎಮ್.ಜೆ.ಎಮ್.ಜಿ ನ ಅಧ್ಯಕ್ಷರಾದ ಫಕೀರ್ ಹುಸನಬ್ಬ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಗುಲ್ವಾಡಿ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಯ ನಿರ್ವತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಉಪಾಧ್ಯಾಯ, ಮಾವಿನಕಟ್ಟೆ ಅಲ್ ಬದ್ರಿಯಾ ಮಸೀದಿಯ ಅಧ್ಯಕ್ಷ ಜಿ.ಎಮ್.ಚೆರಿಯಬ್ಬ ಹಾಜಿ, ಗುಲ್ವಾಡಿ ಆರ್.ಟಿ.ಡಬ್ ಮ್ಯಾನೇಜಿಂಗ್ ಡೈರೆಕ್ಟರ್ ಪಿ.ಬಾಲಕೃಷ್ಣ ಭಂಡಾರಿ, ಆರ್.ಟಿ. ಡಬ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ ತೋಳಾರ್, ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಅಧ್ಯಕ್ಷ ಅಬುಬಕ್ಕರ್ ಹಾಜಿ ನೇಜಾರ್, ಬೆಂಗಳೂರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನಿರ್ದೇಶಕ ಜಿ.ಯಾಕುಬ್ ಯೂಸುಫ್, ಗುಲ್ವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ, ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರು ಪಿ.ಕಿಶನ್ ಕುಮಾರ್ ಹೆಗ್ಡೆ, ಗುಲ್ವಾಡಿ ಪಡುಮನೆ ಅಂತಮ್ಮ ಸದನ ಟಿ.ಪ್ರಭಾಕರ ಶೆಟ್ಟಿ, ಎಮ್.ಜೆ.ಎಮ್.ಜಿ.ಗೌರವಾಧ್ಯಕ್ಷ ಡ್ರೈವರ್ ಅಬ್ಬಾ ಸಾಹೇಬ್, ಎಮ್.ಜೆ.ಎಮ್.ಜಿ.ಉಪಾಧ್ಯಕ್ಷ ಸಂತೆಮಕ್ಕಿ ಪಕೀರ್ ಸಾಹೇಬ್,ಎಮ್.ಜೆ.ಎಮ್.ಜಿ.ಕೋಶಾಧಿಕಾರಿ ಮಮ್ಮಿ ಮಾಮುದ್ ಹಾಜಾರ್,ಎಮ್.ಕೆ.ಮುಹಮ್ಮದ್ ಹಾಜಿ,ಎಮ್.ಜೆ.ಎಮ್.ಜಿ.ಸದಸ್ಯ ಹಮೀದ್ ಹಾಜಾರ್,ಜಿ.ಟಿ.ಉಸ್ಮಾನ್,ಜಿ.ಪಿ.ಮುಹಮ್ಮದ್, ಗಾಂಧಿಕಟ್ಟೆ ಇಬ್ರಾಹಿಂ, ಶೇಕ್ ಅಹಮದ್ ಹಂಝ,ಎಮ್.ಜೆ.ಎಮ್.ಜಿ.ಕಾರ್ಯದರ್ಶಿ ಪಳ್ಳಿ ಉಸ್ಮಾನ್,ಬೋಲ್ ಕಟ್ಟೆ ಮುಅಲ್ಲಿಮ್ ಮುನಿರುಲ್ ಇಸ್ಸಾಂ ಮದರಸ,ಹಸನ್ ಸಾಅದಿ,ಶೆಟ್ರಕಟ್ಟೆ ಇಮಾಮ್ ದಾರುಲ್ ಉಲೂಲ್ ಮಸೀದಿಯ ಮುಹಮ್ಮದ್ ಇಲ್ಯಾಸ್ ಮದಿನಿ, ಗುಲ್ವಾಡಿ ಸಿ.ಹು.ಮುಸ್ಲಿಂ ಯ.ಮೆ.ಕಮಿಟಿ ಅಧ್ಯಕ್ಷ ಬಿ.ಶರಫುದ್ದಿನ್ ಉಪಸ್ಥಿತರಿದ್ದರು.
ಹಂಝಾ ಹಾಜಿ ಸ್ವಾಗತಿಸಿ, ಹನೀಫ್ ಗುಲ್ವಾಡಿ ವಂದಿಸಿದರು. ಪಳ್ಳಿ ಉಸ್ತಾದ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು.