ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಕಾಲ್ತೋಡು ಗ್ರಾಮದ ಗೋಖ೯ಲ್ ಮತ್ತು ಅಲ್ಸಾಡಿ ಪ್ರದೇಶದ ಕಟ್ಟಡ ಕಾಮಿ೯ಕರ ಸಭೆ ಅಲ್ಸಾಡಿ ಮರ್ಲ ಚಿಕ್ಕು ದೈವಸ್ಥಾನದ ವಠಾದಲ್ಲಿ ನಡೆಯಿತು.
ಕಟ್ಟಡ ಕಾಮಿ೯ಕರ ಸಂಘದ ತಾಲೂಕು ಪ್ರಧಾನ ಕಾಯ೯ದಶಿ೯ ಗಣೇಶ ತೊಂಡೆಮಕ್ಕಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಮ್ಮ ಕಾಮಿ೯ಕ ಸಂಘಟನೆ ಸಿಐಟಿಯು ನೇತೃತ್ವದಲ್ಲಿ ನಡೆಸಿದ ಸಮರಶೀಲ ಹೋರಾಟದ ಫಲವಾಗಿ ಇದೀಗ ಕನಾ೯ಟಕ ಕಟ್ಟಡ ಕಾಮಿ೯ಕರ ಕಲ್ಯಾಣ ಮಂಡಳಿ ಬೆಂಗಳೂರು ಇವರು,ಕರೊನಾ ಸಂಕಷ್ಟಕ್ಕೊಳಗಾದ ಕಟ್ಟಡ ಕಾಮ೯ಕರಿಗೆ ಕೊಡಬೇಕಾದ ಬಾಕಿ ಪರಿಹಾರ ಹಣ ರೂಪಾಯಿ 5000 ಈ ಕೂಡಲೇ ಬಿಡುಗಡೆಗೆ ತೀಮಾ೯ನ ಮಾಡಿರುವುದು ಆಶಾದಾಯಕ ಬೆಳವಣಿಗೆ ಹಾಗೂ ಇದು ನಮ್ಮ ಸಂಘದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು.
ಸಿಐಟಿಯು ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ವೆಂಕಟೇಶ್ ಕೋಣಿ ಪ್ರಾಸ್ತಾವಿಕ ಮಾತನಾಡಿದರು.
ಮುಂದಿನ 25,ಏಪ್ರಿಲ್,2021ರಂದು ಗೋಖ೯ಲ್, ಅಲ್ಸಾಡಿ ಪ್ರದೇಶದ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಬೃಹತ್ ಸಮಾವೇಶ ಜರಗಿಸಬೇಕು ಎಂದು ಸಭೆಯಲ್ಲಿ ತೀಮಾ೯ನಿಸಲಾಯಿತು. ಶ್ರೀಧರ ಆಚಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ವಂದಿಸಿದರು.