ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕಷ್ಟಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಎಂಬ ಸಂದೇಶವನ್ನು ಸಾರುವ ಯುಗಾದಿ ಹಬ್ಬವನ್ನು ದೇಶದೆಲ್ಲೆಡೆ ವಿಶಿಷ್ಟವಾಗಿ ವಿಭಿನ್ನವಾಗಿ ಆಚರಿಸಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಹಿಂದು ಧರ್ಮದಲ್ಲಿ ಪ್ರತಿಯೊಂದು ಆಚರಣೆಗಳು, ಹಬ್ಬ ಹರಿದಿನಗಳು ಸಾಂಪ್ರದಾಯಿಕ ದೈವಿಕ ಹಿನ್ನಲೆ ಹೊಂದಿದೆ ಎಂದು ಅಂಗನವಾಡಿ ಕಾರ್ಯಕರ್ತೆ ರೇಖಾ ಕೃಷ್ಣ ಖಾರ್ವಿ ಹೇಳಿದರು.
ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ಇಂದುಧರ ಸಭಾಭವನದಲಿ ಜರಗಿದ ಬೇವು-ಬೆಲ್ಲ ಯುಗಾದಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾಜಿ., ಸಂಘದ ಅಧ್ಯಕ್ಷೆ ಸುಶೀಲಾ ಜಿ.ಟಿ., ಗಂಗೊಳ್ಳಿ ಗ್ರಾಪಂ ಮಾಜಿ ಸದಸ್ಯೆ ಜಯಂತಿ ಜಿ.ಟಿ., ನೇತ್ರಾವತಿ, ಗಂಗಾ ಜಿ.ಟಿ., ಸರೋಜ ಜಿ.ಟಿ., ರುದ್ರಮ್ಮ, ಗಿರಿಜಾ, ಕುಸುಮಾ, ವಸಂತಿ ಎನ್., ಪೂರ್ಣಿಮಾ, ಗಂಗಾ ಮತ್ತು ನೇತ್ರಾವತಿ ಉಪಸ್ಥಿತರಿದ್ದರು.
ಸುಶೀಲ ಜಿ.ಟಿ. ಸ್ವಾಗತಿಸಿದರು. ಕಾರ್ಯದರ್ಶಿ ನಾಗಿಣಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಜಿ.ಟಿ. ವಂದಿಸಿದರು.