ಮೀನುಗಾರರ ಜೀವನದೊಂದಿಗೆ ಸರಕಾರ ಚೆಲ್ಲಾಟ ಆಡುತ್ತಿದೆ: ಮೀನಾಗಾರಿಕಾ ಸಮಿತಿ ಅಧ್ಯಕ್ಷ ನಾಗೇಶ್ ಖಾರ್ವಿ ಆರೋಪ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಕರಾವಳಿಯ ಅಸಂಖ್ಯ ಮೀನುಗಾರರ ಜೀವನಾಧಾರ. ಅದರಲ್ಲಿನ ಅವರ ಕಠಿಣ ದುಡಿಮೆ ಮತ್ತು ಅನಿಶ್ಚಿತ ಬದುಕನ್ನು ಮನಗಂಡ ಸರ್ಕಾರಗಳು ಅವರಿಗೆ ವಿವಿಧ ನೆರವು ನೀಡುತ್ತ ಬಂದಿದ್ದರೆ, ಪ್ರಸಕ್ತ ಬಿಜೆಪಿ ಸರ್ಕಾರ ಅವುಗಳನ್ನು ಒಂದೊಂದಾಗಿ ಕೈಬಿಡುವ ಮೂಲಕ ಅವರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಮೀನುಗಾರಿಕಾ ಸಮಿತಿ ಅಧ್ಯಕ್ಷ ನಾಗೇಶ ಖಾರ್ವಿ ಆರೋಪಿಸಿದ್ದಾರೆ.

Call us

Click Here

ಹಿಂದಿನ ಸರ್ಕಾರಗಳು ನಾಡದೋಣಿ ಮೀನುಗಾರಿಕೆಗೆ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಸೀಮೆ ಎಣ್ಣೆ ಮೀನುಗಾರಿಕಾ ಎಂಜಿನ್ ಮತ್ತು ಅಗತ್ಯ ಸಲಕರಣೆಗಳ ಖರೀದಿಗೆ ನೀಡುತ್ತಿದ್ದ ಸಬ್ಸಿಡಿಯಿಂದ ಉಡುಪಿ ಜಿಲ್ಲೆಯ 4760 ದೋಣಿಗಳನ್ನು ಅವಲಂಬಿಸಿರುವ ಮೀನುಗಾರ ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು. ಬಿಜೆಪಿ ಸರ್ಕಾರ ಇದನ್ನು ಹಂತಹಂತವಾಗಿ ನಿಲ್ಲಿಸಿರುವುದರಿಂದ ಮೀನುಗಾರರು ಕಂಗಾಲಾಗಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರವು ಮೀನುಗಾರ ಮಹಿಳೆಯರಿಗೆ ಮೀನು ವ್ಯಾಪಾರದ ಮೂಲಕ ಸ್ವಾವಲಂಬಿಗಳಾಗಲು ಶೇ 4ರ ಬಡ್ಡಿ ದರದಲ್ಲಿ ನೀಡುತ್ತಿದ್ದ ರೂ 50 ಸಾವಿರದಿಂದ ಒಂದು ಲಕ್ಷದ ವರೆಗೆ ಸಾಲವನ್ನು ಈಗ ಕೊಡುತ್ತಿಲ್ಲ. ಪ್ರಸ್ತುತ ಬಿಜೆಪಿ ಸರ್ಕಾರವು ಮಹಿಳೆಯರ ಸಾಲ ಮನ್ನಾ ಎಂಬ ನಾಟಕವಾಡಿ ಅತ್ತ ಸಾಲ ಮನ್ನಾವೂ ಆಗದೆ, ಇತ್ತ ಮರಳಿ ಸಾಲ ಪಡೆಯಲೂ ಆಗದೆ ಮಹಿಳೆಯರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಸಂಕಷ್ಟ ತೋಡಿಕೊಂಡಿದ್ದಾರೆ.

ಮೀನುಗಾರಿಕೆ ನಡೆಯದ ಅವಧಿಯಲ್ಲಿ ಮೀನುಗಾರರ ಜೀವನ ನಿರ್ವಹಣೆಗೆಂದು ಕಲ್ಪಿಸಿದ್ದ ಸಹಾಯಧನ ಬೆಂಬಲಿತ ಉಳಿತಾಯ ಯೋಜನೆಯನ್ನೂ ರದ್ದುಪಡಿಸಲಾಗಿದೆ. ಪಂಜರ ಮೀನು ಕೃಷಿಗೆ ನಿಗದಿತ ಮಾನದಂಡದಂತೆ ಪ್ರೋತ್ಸಾಹಧನ ನೀಡದೆ ಅಲ್ಪ ಮೊತ್ತ ವಿತರಿಸಲಾಗುತ್ತಿದೆ. ಮೀನುಗಾರರಿಗೆ ಸೀಮಿತವಾದ ಮತ್ಸ್ಯಾಶ್ರಯ ಮನೆಗಳ ಸಂಖ್ಯೆ ಕಡಿತಗೊಳಿಸಲಾಗಿದೆ. ಇದನ್ನು ಮೀನುಗಾರೇತರರಿಗೂ ನೀಡುವ ಮೂಲಕ ಮೀನುಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರವು ಮೀನುಗಾರರಿಗೆ ಮಾತಿನ ಮಂಟಪದ ಭರವಸೆ ನೀಡುವುದರಲ್ಲೇ ಕಾಲಹರಣ ಮಾಡುತ್ತಿದೆ. ಸರ್ಕಾರ ಮೀನುಗಾರರೆಡೆಗಿನ ತನ್ನ ನಿರ್ಲಕ್ಷ್ಯ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮೀನುಗಾರರು ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸರ್ಕಾರವನ್ನು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸಿದ್ದಾರೆ.

Leave a Reply