ಕುಂದಾಪುರ: ಮನೆಯಿಂದ ಹೊರಗೆ ತೆರಳಿದ ಕಂಬದಕೋಣೆಯ ಗೋವಿಂದ ದೇವಸ್ಥಾನದ ಬಳಿಯ ದತ್ತಾತ್ರೆಯ ಭಟ್ ಎಂಬುವವರ ಪತ್ನಿ ಕಾವೇರಿ ಭಟ್ (49) ನಾಪತ್ತೆಯಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೋ ಕೆಲಸಕ್ಕೆಂದು ಕಳೆದ ಸೋಮವಾರ ಮನೆಬಿಟ್ಟು ತೆರಳಿದ್ದ ಕಾವೇರಿ ಭಟ್ ಒಂದು ವಾರ ಕಳೆದರೂ ಎಲ್ಲಿಗೆ ಹೋಗಿದ್ದಾರೆ ಎಂಬುದರ ಸುಳಿವು ಮಾತ್ರ ಲಭ್ಯವಾಗಿಲ್ಲ. ಕಾವೇರಿ ಭಟ್ ಆಗಾಗ ತಲ್ಲೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಅವರ ತಾಯಿಯ ಮನೆಗೆ ಹೋಗುತ್ತಿದ್ದರು. ಮೊದಲ ದಿನ ಅಲ್ಲಿಗೆ ಹೋಗಿರಬಹುದೆಂದು ಗಂಡನ ಮನೆಯಲ್ಲಿ ಭಾವಿಸಿದ್ದರು. ಆದರೆ ಕರೆ ಮಾಡಿದಾಗ ಅಲ್ಲಿಯೂ ಇಲ್ಲದಿರುವುದು ತಿಳಿದುಬಂದಿದೆ. ಇತರೆ ಸಂಬಂಧಿಗಳ ಮನೆಯಲ್ಲಿಯೂ ವಿಚಾರಿಸಲಾಗಿದೆ. ಆದರೆ ಈ ವರೆಗೆ ಕಾವೇರಿ ಭಟ್ ಅವರ ಸುಳಿವು ಮಾತ್ರ ಲಭ್ಯವಾಗಿಲ್ಲ.
ಕೊನೆಯ ಕಾವೇರಿ ಭಟ್ ಅವರ ಸಹೋದರ ವಿಶ್ವನಾಥ ಭಟ್ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ತನಿಕೆ ನಡೆಸುತ್ತಿದ್ದಾರೆ.