ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂಡಿಯನ್ ಸೀನಿಯರ್ ಛೇಂಬರ್ ಉಪ್ಪುಂದ ಲೀಜನ್‌ನ ನೂತನ ಅಧ್ಯಕ್ಷರ ಪದಪ್ರದಾನ ಸಮಾರಂಭ ಬೈಂದೂರು ಒತ್ತಿನಣೆ ಕ್ಷಿತಿಜ ನೇಸರಧಾಮ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಅರವಿಂದ ರಾವ್ ಕೇದಿಗೆ ಮಾತನಾಡಿ, ‘ವಿ ಫಾರ್ ವಿಕ್ಟರಿ’ ಎಂಬ ಘೋಷವಾಕ್ಯದೊಂದಿಗೆ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳೋಣ ಎಂದರು.
ನಿಕಟಪೂರ್ವ ಅಧ್ಯಕ್ಷರಾದ ಸೀನಿಯರ್ ಉದಯ್ ಡಿ. ಆರ್ ನೂತನ ಅಧ್ಯಕ್ಷ ಎನ್. ಕೆ ಬಿಲ್ಲವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ನಿರ್ದೇಶಕರಾದ ಸೀನಿಯರ್ ಚಿತ್ರಕುಮಾರ್, ರಾಷ್ಟ್ರೀಯ ಸಂಯೋಜಕರಾದ ಸೀನಿಯರ್ ನವೀನ್ ಐಪಿಪಿ ಗಿರೀಶ್ ಶ್ಯಾನುಭಾಗ್, ನಿಕಟಪೂರ್ವ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ, ನೂತನ ಖಜಾಂಚಿ ಸೀನಿಯರ್ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಸೀನಿಯರ್ ಶ್ರೀಕಾಂತ್ ಕಾಮತ್ ಧನ್ಯವಾದಗೈದರು.