ಕುಂದಾಪುರ ಸರಕಾರಿ ಆಸ್ಪತ್ರೆಯನ್ನು ಕೋವಿಡ್ ನೆಪದಲ್ಲಿ ಸ್ಥಳಾಂತರಿಸುವ ಹಿಂದೆ ಹುನ್ನಾರ ಅಡಗಿದೆ: ಎಂಎಲ್‌ಸಿ ಕೆ. ಪ್ರತಾಪಚಂದ್ರ ಶೆಟ್ಟಿ ಆರೋಪ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ 19 ರೋಗಿಗಳಿಗೆ ಮಾತ್ರ ಮೀಸಲಿಟ್ಟು, ಏಕಾಏಕಿಯಾಗಿ ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ಉಡುಪಿ ಜಿಲ್ಲಾಸ್ಪತ್ರಗೆ ಸ್ಥಳಾಂತರಿಸಿರುವುದು ಖಂಡನೀಯ ಹಾಗೂ ಜನವಿರೋಧಿ ಕ್ರಮವಾಗಿದ್ದು ಈ ನಿರ್ಧಾರದ ಹಿಂದೆ ಸ್ಥಳೀಯ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವಂತೆ ಮಾಡುವ ಹುನ್ನಾರ ಅಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಆರೋಪಿಸಿದ್ದಾರೆ.

Call us

Click Here

ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಎ.28ರಂದು ಎರಡನೇ ಭಾರಿಗೆ ವಿವರವಾದ ಪತ್ರ ಬರೆದಿರುವ ಅವರು ಈ ಜನವಿರೋಧಿ ಕ್ರಮವು ಹೀಗೆಯೇ ಮುಂದುವರಿದರೆ ಅದರ ವಿರುದ್ದ ಜನಭಿಪ್ರಾಯ ಮೂಡಿಸುವುದರೊಂದಿಗೆ ಸೂಕ್ತ ವೇದಿಕೆಯಲ್ಲಿ ನಿರಂತರವಾಗಿ ಪ್ರತಿಭಟನೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 30,444 ಜನಸಂಖ್ಯೆಯಿದ್ದು, ಪುರಸಭೆಯನ್ನು ಹೊರತುಪಡಿಸಿ ಕುಂದಾಪುರ ತಾಲೂಕಿನ ಇತರೆ ಪ್ರದೇಶಗಳು 2,23,296 ಜನಸಂಖ್ಯೆಯಿದೆ. ಪುರಸಭೆ ಸೇರಿದಂತೆ ಆಸುಪಾಸಿನ ಗ್ರಾಮಗಳ ಬಡ ಹಿಂದುಳಿದ ಜನರು ತಮ್ಮ ಚಿಕಿತ್ಸೆಗಾಗಿ ಕುಂದಾಪುರ ತಾಲೂಕು ಆಸ್ಪತ್ರೆಯನ್ನು ಆಶ್ರಯಿಸಿರುತ್ತಾರೆ ಹಾಗೂ ಸುತ್ತಮುತ್ತಲಿನ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಕೂಡ ಈ ಆಸ್ಪತ್ರೆಯನ್ನು ಅವಲಂಬಿಸಿರುತ್ತಾರೆ. ಆದರೆ ಕೋವಿಡ್ ನೆಪ ನೀಡಿ ಸಾಮಾನ್ಯ ರೋಗಿಗಳಿಗೆ ದೂರದ ಜಿಲ್ಲಾಸ್ಪತ್ರೆಗೆ ಗೋಗುವ ಅನಿವಾರ್ಯತೆ ಸೃಷ್ಟಿಸಿರುವುದು, ಆರ್ಥಿಕವಾಗಿ ಹಿಂದುಳಿದ ಬಡರೋಗಿಗಳು ತಮ್ಮ ಚಿಕಿತ್ಸೆಗಾಗಿ ಅನಿವಾರ್ಯವಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸುವಂತೆ ಮಾಡುವ ಹುನ್ನಾರವೆಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದವರು ಆರೋಪಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ತಾಲೂಕು ಹೊರತುಪಡಿಸಿ ಉಡುಪಿ, ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳು ಹಾಗೂ ಕೋವಿಡ್ 19 ರೋಗಿಗಳಿಗೆ ಸಮಾನ ಅವಕಾಶ ನೀಡಿ ಪ್ರತ್ಯೇಕವಾಗಿ ಅಗತ್ಯ ನುರಿತ ವೈದ್ಯರು ಹಾಗೂ ವ್ಯದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವಿಭಾಗ ಮಟ್ಟದ ಆಸ್ಪತ್ರೆಯಾಗಿರುವ ಕುಂದಾಪುರದಲ್ಲಿ ಮಾತ್ರ ಇದಕ್ಕೆ ವ್ಯತಿರಿತ್ತವಾಗಿ, ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಅದೇ ಆಸ್ಪತ್ರೆಯ ಹೊಸಕಟ್ಟಡವು 250ರಿಂದ 300 ಹಾಸಿಗಳನ್ನು ಹೊಂದಿ ಕೋವಿಡ್ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಕೂಡ ದುರುದ್ದೇಶಪೂರ್ವಕವಾಗಿ ಒಳರೋಗಿ ಮತ್ತು ಹೊರರೋಗಿ ವಿಭಾಗವನ್ನೇ ಉಡುಪಿಗೆ ಸ್ಥಳಾಂತರಿಸಲಾಗಿದೆ ಸರ್ಕಾರೀ ಆಸ್ಪತ್ರೆಯ ಹೊರಗೆ ಪ್ರತ್ಯೇಕವಾಗಿ ಕೋವಿಡ್ ಆಸ್ಪತ್ರೆಗಳನ್ನು ವ್ಯವಸ್ಥೆಗೊಳಿಸಿದ ನಿದರ್ಶಗಳಿವೆಯೇ ಹೊರತು ಕೋವಿಡ್ ಕೇಂದ್ರಕ್ಕಾಗಿ ಇರುವ ಸರ್ಕಾರೀ ಆಸ್ಪತ್ರೆಯನ್ನೇ ಹೊರಗಟ್ಟಿರುವುದು ಎಲ್ಲಿಯೂ ಕಂಡು ಬರುವುದಿಲ್ಲ ಇಂತಹ ಸ್ವೇಚ್ಚಾರದ, ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಸರ್ಕಾರೀ ಆಸ್ಪತ್ರೆ ಇರುವುದು ಜನರ ಸೇವೆಗಾಗಿಯೇ ಹೊರತು ಖಾಸಗಿ ಆಸ್ಪತ್ರೆಗಳ ಅನುಕೂಲಕ್ಕಾಗಿ ಅಲ್ಲ ಎನ್ನುವುದು ಗಮದಲ್ಲಿರಿಸಿಕೊಂಡು ಈ ಸ್ವೇಚ್ಚಾರದ ನಿಯಮಬಾಹಿರ ಜನವಿರೋಧಿ ಕ್ರಮವನ್ನು ತುರ್ತಾಗಿ ಸರಿಪಡಿಸುದರೊಂದಿಗೆ ಕುಂದಾಪುರ ಸರ್ಕಾರೀ ಅಸ್ಪತ್ರೆಯ ಹೊಸ ಕಟ್ಟಡವನ್ನು ಕೋವಿಡ್ 19 ರೋಗಿಗಳಿಗೆ ಮಾತ್ರ ಮೀಸಲಿರಿಸಿ ಆಸ್ಪತ್ರೆಯ ಹೊರರೋಗಿ ಮತ್ತು ಒಳರೋಗಿ ವಿಭಾಗಳನ್ನು ಹಳೆಯ ಬ್ಲಾಕ್ ಕಟ್ಟಡದಲ್ಲಿಯೇ ಹಿಂದಿನ ವರ್ಷಗಳಂತೆಯೇ ಮುಂದುವರಿಸಿ ಸಾಮಾನ್ಯ ರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲು ಅಗತ್ಯ ಕ್ರಮ ವಹಿಸುವಂತೆ ಅವರು ಆಗ್ರಹಿಸಿದ್ದಾರೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

Click here

Click here

Click here

Click Here

Call us

Call us

Leave a Reply