0-18 ವರ್ಷದ ಮಕ್ಕಳಿಗೆ ಉಚಿತ ಟೆಲಿ ಕೌನ್ಸಿಲಿಂಗ್ ಸಹಾಯವಾಣಿ ಹಾಗೂ ಮಕ್ಕಳ ಉಚಿತ ಸಹಾಯವಾಣಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸಮಗ್ರ ಮಕ್ಕಳರಕ್ಷಣೆ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ಆಪ್ತಸಮಾಲೋಚನೆಗೆ ಅಗತ್ಯವಿರುವ 0-18 ವರ್ಷದ ಎಲ್ಲಾ ಮಕ್ಕಳಿಗಾಗಿ ಉಚಿತ ಟೆಲಿ ಕೌನ್ಸಿಲಿಂಗ್ ಸೌಲಭ್ಯವನ್ನು ನೀಡಲು ಟೋಲ್ ಪ್ರೀ ಸಂಖ್ಯೆ 14499 ಸ್ಥಾಪಿಸಲಾಗಿದೆ. ಇದು ಸಮಗ್ರ ಮಕ್ಕಳ ರಕ್ಷಣಾಯೋಜನೆಯಡಿ ನಿರ್ಲಕ್ಷತೆಗೆ
ಒಳಗಾದ, ಪರಿತ್ಯಜಿಸಲ್ಪಟ, ದೌರ್ಜನ್ಯಕ್ಕೊಳಗಾದ, ಶೋಷಣೆಗೆ ಒಳಗಾದ, ಕುಟುಂಬದಿಂದ ಬೇರ್ಪಟ್ಟ ಮಕ್ಕಳು, ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮ ಪಡಿಸುವ ಉದ್ದೇಶವನ್ನು ಹೊಂದಿರುವ ಕೇಂದ್ರ ಪುರಸ್ಕೃತ ಯೋಜನೆಯಾಗಿದೆ.

Call us

Click Here

ಕೋವಿಡ್-19 ಎರಡನೇ ಅಲೆ ಅತೀ ಹೆಚ್ಚಾಗಿದ್ದು ಈ ಸಂದರ್ಭದಲ್ಲಿ ಆಪ್ತಸಮಾಲೋಚನೆ ಅಗತ್ಯವಿರುವ ಎಲ್ಲಾ ಮಕ್ಕಳಿಗಾಗಿ ಟೆಲಿಕೌನ್ಸಿಲಿಂಗ್ ಸೌಲಭ್ಯವನ್ನು ನೀಡಲಾಗುವುದು.ಆಪ್ತಸಮಾಲೋಚನೆ ಬಯಸುವ ಉಡುಪಿ ಜಲ್ಲೆಯ ಎಲ್ಲಾ ಮಕ್ಕಳು ಬೆಳಗ್ಗೆ 8 ರಿಂದರಾತ್ರಿ 8 ಗಂಟೆಯವರೆಗೆ 14499 ಸಂಖ್ಯೆಗೆ ಕರೆಮಾಡುವ ಮೂಲಕ ಉಚಿತವಾಗಿ ಆಪ್ತಸಮಾಲೋಚನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ ಹಾಗೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ; 1098 ಗೆ ಕರೆಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆ ತಿಳಿಸಿದೆ.

Leave a Reply