ಪಡಿತರ ಚೀಟಿ ಸಂಖ್ಯೆಗಳ ಬದಲಾವಣೆ ಕುರಿತು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಪಡಿತರ ಚೀಟಿಯಲ್ಲಿ ಅಕ್ಷರ ಅಂಕೆಯ ಅಥವಾ 12 ಅಂಕಿಗಳಿಗಿಂತ ಭಿನ್ನವಾದ ಸಂಖ್ಯೆ ನೀಡಿರುವ ಪಡಿತರಚೀಟಿಗಳಿಗೆ (ಉದಾ: bnlr1234567,ctd 12345678 ) ಇದೀಗ 12 ಅಂಕಿಗಳ ಹೊಸ ಸಂಖ್ಯೆಯನ್ನು ನೀಡಲಾಗಿದೆ.

Call us

Click Here

ಸಾರ್ವಜನಿಕರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ , ತಮ್ಮ ಪಡಿತರ ಚೀಟಿ /ಆಧಾರ್ ಅಥವಾ ಪಡಿತರ ಚೀಟಿ ಸಂಖ್ಯೆ ನೀಡಿದಾಗ , ಬದಲಾಗಿರುವ ಪಡಿತರ ಚೀಟಿ ಸಂಖ್ಯೆಯನ್ನು ನೀಡಲು ಮತ್ತು ನಿಮ್ಮ ಪಡಿತರ ಚೀಟಿಯ ಮೇಲೆ ಬರೆಯಲು ನ್ಯಾಯಬೆಲೆ ಅಂಗಡಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಸಾರ್ವಜನಿಕರು ಇನ್ನು ಮುಂದೆ ಬದಲಾಗಿರುವ ಹೊಸ ಪಡಿತರ ಚೀಟಿ ಸಂಖ್ಯೆಯನ್ನು ಬಳಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳನ್ನು ಸಂಪರ್ಕಿಸಲು ಕೋರಿದ್ದು, ಈ ವಿಷಯವಾಗಿ ಯಾವುದೇ ಸಮಸ್ಯೆಗಳಿದ್ದಲ್ಲಿ ತಾಲೂಕಿನ ಆಹಾರ ಶಿರಸ್ತೇದಾರ್/ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು ಮತ್ತು ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Leave a Reply