ಜೆಸಿಐ ಕುಂದಾಪುರ ಸಿಟಿಯಿಂದ ಲಾಕ್‌ಡೌನ್‌ನಲ್ಲಿ ಹಸಿದವರಿಗೆ ಊಟ: ನಿತ್ಯವೂ 200ಕ್ಕೂ ಅಧಿಕ ಮಂದಿಗೆ ವಿತರಣೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಸಿಐ ಕುಂದಾಪುರ ಸಿಟಿ ಘಟಕದ ವತಿಯಿಂದ ‘ಹಸಿದವರಿಗೆ ಊಟ’ ಕಾರ್ಯಕ್ರಮದಡಿಯಲ್ಲಿ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವ ಜನರಿಗೆ ಮಧ್ಯಾಹ್ನದ ಊಟ ವಿತರಿಸಲಾಗುತ್ತಿದೆ. ಕುಂದಾಪುರ ಪರಿಸರದ ಸುಮಾರು 150ರಿಂದ 200 ಮಂದಿಗೆ ನಿತ್ಯವೂ ಊಟ ವಿತರಿಸಲಾಗುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Call us

Click Here

Click here

Click Here

Call us

Visit Now

Click here

ಪ್ರತಿನಿತ್ಯವೂ ಸ್ಥಳೀಯ ಬಾಣಸಿಗರ ಮನೆಯಲ್ಲಿ ಅಡುಗೆ ತಯಾರಿಸಿ ಮಧ್ಯಾಹ್ನದ ಹೊತ್ತಿಗೆ ಕುಂದಾಪುರ ಪರಿಸರದಲ್ಲಿ ತಿರುಗಾಡಿ ಊಟ ವಿತರಿಸಲಾಗುತ್ತಿದೆ. ಸಂಸ್ಥೆಯ ಪದಾಧಿಕಾರಿಗಳು ಹಾಗೂ ದಾನಿಗಳ ಆರ್ಥಿಕ ನೆರವಿನೊಂದಿಗೆ ಕುಂದಾಪುರ ಜೆಸಿಐ ಸಿಟಿ ಈ ಯೋಜನೆ ಹಮ್ಮಿಕೊಂಡಿದ್ದು, ಹೋಟೆಲ್ ಇಲ್ಲದೇ ಊಟವೂ ಸಿಗದ ಕೂಲಿ ಕಾರ್ಮಿಕರು, ಲಾರಿ ಚಾಲಕರು, ನಿರ್ಗತಿಕರು ಹಾಗೂ ಆಸ್ಪತ್ರೆಯ ರೋಗಿಗಳಿಗೆ ನೆರವಾಗಿದೆ.

ನಿತ್ಯ ಮಧ್ಯಾಹ್ನದ ಊಟ ವಿತರಿಸುವ ವೇಳೆ ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ವಿಜಯ್ ಭಂಡಾರಿ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ಕಾರ್ಯದರ್ಶಿ ಗುರುರಾಜ್ ಕೊತ್ವಾಲ್ ಸೇರಿದಂತೆ ಜೆಸಿಐನ ವಿವಿಧ ಸದಸ್ಯರು ಸಾಥ್ ನೀಡುತ್ತಿದ್ದಾರೆ.

Call us

ಲಾಕ್ಡೌನ್ ವೇಳೆಯಲ್ಲಿ ಹೋಟೆಲುಗಳು ಮುಚ್ಚಿರುವುದರಿಂದ ಮಧ್ಯಾಹ್ನದ ಊಟಕ್ಕೆ ತೊಂದರೆಯಾಗುತ್ತಿರುವುದನ್ನು ಅರಿತು ‘ಹಸಿದವರಿಗೆ ಊಟ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಧ್ಯಾಹ್ನದ ಊಟ ವಿತರಿಸಲಾಗುತ್ತಿದೆ. ಜೆಸಿಐ ಕುಂದಾಪುರ ಸಿಟಿಯ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಈ ಯೋಜನೆ ಮುಂದುವರಿಸುತ್ತಿದ್ದೇವೆ. – ವಿಜಯ್ ಭಂಡಾರಿ, ಅಧ್ಯಕ್ಷರು ಜೆಸಿಐ ಕುಂದಾಪುರ ಸಿಟಿ

ಇದನ್ನೂ ಓದಿ:
► ಕೊಟೇಶ್ವರ ಶ್ರೀ ರಾಮ ಸಂಘದ ವತಿಯಿಂದ ಲಾಕ್‌ಡೌನ್ ಅವಧಿಯಲ್ಲಿ ಉಚಿತ ಉಪಹಾರದ ವ್ಯವಸ್ಥೆ – https://kundapraa.com/?p=47877 
► ಕುಂದಾಪುರ: ಶ್ರೀ ನಾರಾಯಣಗುರು ಯುವಕ ಮಂಡಲದಿಂದ ಹಸಿದವರಿಗೆ ಊಟ ವಿತರಣೆ –https://kundapraa.com/?p=48029 

Leave a Reply

Your email address will not be published. Required fields are marked *

15 + two =