ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕರೋನಾ ಮಹಾಮಾರಿ ಹಾಗೂ ದೇಶಕ್ಕೆ ಎದುರಾಗಿರುವ ಆರೋಗ್ಯ ಆಪತ್ತಿನಿಂದ ರಕ್ಷಣೆ ಮಾಡುವಂತೆ ಪ್ರಾರ್ಥಿಸಿ ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ವಿಶೇಷ ಚಂಡಕಾ ಯಾಗ ಪೂಜೆಯನ್ನು ಸಂಕಲ್ಪಿಸಿಕೊಂಡರು.
ಬಳಿಕ ಶ್ರೀ ಆದಿ ಶಂಕರಾಚಾರ್ಯರರ ಸರ್ವಜ್ಞ ಪೀಠವನ್ನು ದರ್ಶನ ಮಾಡಿ ಪೂಜೆ ಸಲ್ಲಿಸಿ ಅಲ್ಲಿಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದು ಮತ್ತು ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ವ್ಯವಸ್ಥಾಪನಾ ಸಮಿತಿಯಿಂದ ಪರಿಶೀಲಿಸಲಾಯಿತು.
ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರುಗಳಾದ ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ ಬೆಳ್ವೆ, ಕೆ.ಪಿ. ಶೇಖರ್, ಸಂಧ್ಯಾ ರಮೇಶ್, ರಾಮಚಂದ್ರ ಅಡಿಗ, ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ಹಾಗೂ ದೇವಳದ ಸಿಬ್ಬಂದಿಗಳು ಇದ್ದರು.