ಸೈಕಲ್‌ಗೆ ಕಾರು ಡಿಕ್ಕಿ: ಬಾಲಕ ಸಾವು

Click Here

Call us

Call us

Call us

ಕುಂದಾಪುರ: ಇಲ್ಲಿನ ಅಂಕದಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲಿನಲ್ಲಿ ಸಂಚರಿಸುತ್ತಿದ್ದ ಬಾಗಲಕೋಟೆ ಮೂಲಕ ಬಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ವರದಿಯಾಗಿದೆ. ಚಂದ್ರಶೇಖರ (14) ಮೃತ ದುರ್ದೈವಿ ಬಾಲಕ

Call us

Click Here

ಘಟನೆಯ ವಿವರ:

ಬಾಗಲಕೋಟೆಯಲ್ಲಿ ೮ನೇ ತರಗತಿ ಓದುತ್ತಿರುವ ಚಂದ್ರಶೇಖರ ಇಂದು ಶಾಲೆ ರಜೆ ಇದ್ದ ಕಾರಣ ನಿನ್ನೆ ಅಂಕದಕಟ್ಟೆಯ ಸಮೀಪದಲ್ಲಿ  ವಾಸವಾಗಿರುವ ತಂದೆ-ತಾಯಿಯನ್ನು ನೋಡಲೇಂದು ಬಂದಿದ್ದರು. ಇಲ್ಲಿಯೇ ಇದ್ದ ಸಹೋದರನ ಸೈಕಲ್ ಏರಿ ಅಂಗಡಿಗೆ ತೆರಳುತ್ತಿದ್ದ. ಅಂಕದಕಟ್ಟೆ ಸಮೀಪವಿರುವ ಡಿವೈಡರ್ ದಾಟುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಗಾಗಲೇ ಮೃತಪಟ್ಟಿದ್ದರು.

ಒಂದು ದಿನಕ್ಕೆ ತಂದೆ-ತಾಯಿಯನ್ನು ನೋಡಲೆಂದು ಬಂದ ಬಾಲಕನಿಗೆ ಈ ರೀತಿಯಲ್ಲಿ ಅನಾಹುತವಾಗಿರುವುದು ವಿಪರ್ಯಾಸವೇ ಸರಿ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply