ಮೀನುಗಾರರಿಗೆ ಸರಕಾರ ಹಂಚಿಕೆ ಮಾಡಿರುವ ಸೀಮೆಎಣ್ಣೆ ಸಕಾಲದಲ್ಲಿ ಬಿಡುಗಡೆಗೊಳಿಸಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕಳೆದ ನಾಲ್ಕೈದು ತಿಂಗಳಿನಿಂದ ಮೀನುಗಾರರಿಗೆ ಸೀಮೆಎಣ್ಣೆ ಹಂಚಿಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಮೀನುಗಾರಿಕೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಮೀನುಗಾರರಿಗೆ ಸರಕಾರ ಹಂಚಿಕೆ ಮಾಡಿರುವ ಸೀಮೆಎಣ್ಣೆಯನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕೆಂದು ಗಂಗೊಳ್ಳಿ ಭಾಗದ ಮೀನುಗಾರರು ಆಗ್ರಹಿಸಿದ್ದಾರೆ.

Call us

Click Here

ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ 852 ವಿಶೇಷ ರಹದಾರಿಗಳಿದ್ದು 138.876 ಕಿ.ಲೀ ಸೀಮೆಎಣ್ಣೆ ಬೇಡಿಕೆ ಇದೆ. ಇದರಂತೆ ಸರಕಾರ138.876 ಕಿ.ಲೀ. ಸೀಮೆಎಣ್ಣೆಯನ್ನು ಹಂಚಿಕೆ ಮಾಡಿ ಬಿಡುಗಡೆಗೆ ಆದೇಶ ನೀಡಿದೆ. ಆದರೆ ಕೆಎಫ್‌ಸಿಎಸ್‌ಸಿ ಯವರು ನ್ಯಾಯಬೆಲೆ ಅಂಗಡಿಗೆ ಕೇವಲ 96.70ಕಿ.ಲೀ ಸೀಮೆಎಣ್ಣೆಯನ್ನು ಮರುಹಂಚಿಕೆ ಮಾಡಿ ಸೀಮೆಎಣ್ಣೆ ಬಿಡುಗಡೆ ಮಾಡಿದ್ದು, ಸುಮಾರು 46 ಕಿ.ಲೀ ಕಡಿಮೆ ಹಂಚಿಕೆ ಮಾಡಿರುವುದು ಗಂಗೊಳ್ಳಿ ಭಾಗದ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸೀಮೆಎಣ್ಣೆ ಬಿಡುಗಡೆ ಮಾಡಿಲ್ಲ. ಜನವರಿ ತಿಂಗಳಿನಲ್ಲಿ ಪ್ರತಿ ರಹದಾರಿಗೆ ಕೇವಲ 87 ಲೀಟರ್, ಮಾರ್ಚ್‌ನಲ್ಲಿ ಕೂಡ ಕೇವಲ 30 ಲೀಟರ್ ಬಿಡುಗಡೆ ಮಾಡಲಾಗಿದೆ ಅಲ್ಲದೆ ಎಪ್ರಿಲ್ ತಿಂಗಳಿನಲ್ಲಿ ಸುಮಾರು 10 ಸಾವಿರ ಲೀಟರ್ ಸೀಮೆಎಣ್ಣೆ ಬಿಡುಗಡೆ ಮಾಡಲು ಬಾಕಿ ಇದ್ದು, ಪ್ರಸ್ತುತ ಮೇ ತಿಂಗಳಿನಲ್ಲಿ ಕೂಡ46ಸಾವಿರ ಲೀಟರ್ ಕಡಿಮೆ ಸೀಮೆಎಣ್ಣೆ ನೀಡುವ ಮೂಲಕ ಮೀನುಗಾರರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಡೆಸುತ್ತಿದೆ ಎಂದು ಸ್ಥಳೀಯ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೀನುಗಾರರಿಗೆ ನಿಗದಿಯಂತೆ ಸರಕಾರ ಹಂಚಿಕೆ ಮಾಡಿದಷ್ಟು ಸೀಮೆಎಣ್ಣೆಯನ್ನು ಬಿಡುಗಡೆ ಮಾಡಬೇಕು. ಕಳೆದ ಮೂರ‍್ನಾಲ್ಕು ತಿಂಗಳಿನಲ್ಲಿ ಮೀನುಗಾರರಿಗೆ ಬಿಡುಗಡೆ ಮಾಡಲು ಬಾಕಿ ಇದ್ದ ಸೀಮೆಎಣ್ಣೆಯನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಿ ಮೀನುಗಾರರಿಗೆ, ಮೀನುಗಾರಿಕೆ ಅನುಕೂಲ ಮಾಡಿಕೊಡಬೇಕೆಂದು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಒತ್ತಾಯಿಸಿದ್ದಾರೆ.

Leave a Reply