ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾವುಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಆವರಣದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡುವ ಕುರಿತು ಗರಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಮುತ್ತ ಬಿಲ್ಲವರ ಅಧ್ಯಕ್ಷತೆಯಲ್ಲಿ ಇತ್ತಿಚಿಗೆ ಆನ್ಲೈನ್ ಸಭೆ ನಡೆಯಿತು.
ಟ್ರಸ್ಟಿನ ಮುಂಬಯಿ ಸಮಿತಿಯ ಅಧ್ಯಕ್ಷರಾದ ಡಾ. ಎನ್ ಕೆ ಬಿಲ್ಲವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸಮುದಾಯ ಭವನದ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ ಆನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ, ಶೀನ ಪೂಜಾರಿ, ಜಗದೀಶ ಪೂಜಾರಿ ಹಕ್ಕಾಡಿ, ಮುಂತಾದವರು ತಮ್ಮ ಸಲಹೆಗಳನ್ನು ನೀಡುವುದರ ಜೊತೆಗೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣ ಸಮಿತಿಗೆ ಸದಸ್ಯರ ಆಯ್ಕೆಯನ್ನು ಮಾಡಲಾಯಿತು. ಆನಂದ ಶೆಟ್ಟಿ (ಗೌರವ ಅಧ್ಯಕ್ಷರು), ಡಾ. ಎನ್ ಕೆ ಬಿಲ್ಲವ (ಅಧ್ಯಕ್ಷರು), ಜಗದೀಶ ಪೂಜಾರಿ ಹಕ್ಕಾಡಿ (ಉಪಾಧ್ಯಕ್ಷರು), ವಿಶ್ವನಾಥ ಶೆಟ್ಟಿ (ಉಪಾಧ್ಯಕ್ಷರು), ಶೀನ ಪೂಜಾರಿ (ಉಪಾಧ್ಯಕ್ಷರು), ಶೇಖರ ಪೂಜಾರಿ (ಪ್ರಧಾನ ಕಾರ್ಯದರ್ಶಿ) ಪರಮೇಶ್ವರ ಪೂಜಾರಿ ಮತ್ತು ರಾಮಕೃಷ್ಣ ಬಿಲ್ಲವ (ಉಪ ಕಾರ್ಯದರ್ಶಿ), ಮುತ್ತ ಬಿಲ್ಲವ ಕುದ್ರು (ಖಜಾಂಚಿ) ಹಾಗೂ ಚಂದ್ರಶೇಖರ ಶೆಟ್ಟಿ (ಉಪಖಜಾಂಚಿ)
ಸಮಿತಿಯ ಸದಸ್ಯರಾಗಿ ಕುಶಾಲ್ ಶೆಟ್ಟಿ, ಶ್ರೀ ರಾಜೀವ ಶೆಟ್ಟಿ, ಸಂಜು ಪೂಜಾರಿ ಮಾವಿನಕೆರೆ, ಸೀತಾರಾಮ ಬಿಲ್ಲವ, ರಘು ಪೂಜಾರಿ ಬಿ ಇಎಸ್‌ಟಿ ಹಾಗೂ ಗರಡಿ ಮನೆಯ ನಾಗೇಶ ಪೂಜಾರಿ, ರಾಘವೇಂದ್ರ ಪೂಜಾರಿ, ವಸಂತ ಪೂಜಾರಿ, ಸತ್ಯವತಿ ಬಿಲ್ಲವ, ಬೇಬಿ ಪೂಜಾರಿ, ಸುರೇಶ ಪೂಜಾರಿ, ಸತೀಶ್ ಪೂಜಾರಿ ಆಯ್ಕೆಗೊಂಡರು.
ಗೌರವ ಸಲಹೆಗಾರರಾಗಿ ವೇ.ಮೂ.ರಾಘವೇಂದ್ರ ಕಾರಂತ್, ಬಾಬು ಬಿಲ್ಲವ, ಕೆ. ಪುಂಡಲೀಕ ನಾಯಕ್, ವಾಸ್ತು ಸಲಹೆಗಾರರಾದ ಪಂಡಿತ್ ನವೀನ್‌ಚಂದ್ರ ರಾಮ ಸನೀಲ್ ಅವರನ್ನು ಆಯ್ಕೆ ಮಾಡಲಾಯಿತು.