ಮರವಂತೆ: ಮೀನುಗಾರರಿಂದ ಸಮುದ್ರ ಪೂಜೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀನುಗಾರರ ಒಕ್ಕೂಟದ ವತಿಯಿಂದ ನಾಡದೋಣಿ ಮೀನುಗಾರರು ಸಮುದ್ರ ಪೂಜೆ ಹಾಗೂ ಕಡಲಿಗೆ ಬಾಗಿನ ಅರ್ಪಿಸಿ, ಈ ಮೀನುಗಾರಿಕೆ ಋತುವಿನಲ್ಲಿ ಸುರಕ್ಷಿತ ಹಾಗೂ ಸಮೃದ್ಧ ಮತ್ಸ್ಯಸಂಪತ್ತನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

Call us

Click Here

ಪ್ರತೀ ವರ್ಷದ ಸಂಪ್ರದಾಯದಂತೆ ನಾಡದೋಣಿ ಮೀನುಗಾರರು ಕಡಲಿಗೆ ಮೀನುಗಾರಿಕೆಗೆ ಇಳಿಯುವ ಮುನ್ನ ಮರವಂತೆಯ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಬಳಿ ಸಮುದ್ರ ಪೂಜೆ ಸಲ್ಲಿಸುವುದು ವಾಡಿಕೆ. ಸಂಪ್ರದಾಯದಂತೆ ಗುರುವಾರ ಬೆಳಿಗ್ಗೆ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಶ್ರೀದೇವರಿಗೆ ಪೂಜೆ ಸಲ್ಲಿಸಿ, ದೇವಸ್ಥಾನದ ಸಮೀಪದ ತೀರದಲ್ಲಿ ಸಮುದ್ರ ದೇವತೆಯ ಲಿಂಗ ರಚಿಸಿ ಪೂಜೆ ಮಾಡಿದ ಬಳಿಕ ಸಮುದ್ರ ಪೂಜೆ ನಡೆಯಿತು. ಅರ್ಚಕ ನರಸಿಂಹ ಅಡಿಗ ಅವರು ಸಮುದ್ರ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಮುದ್ರ ಪೂಜೆಯ ಬಳಿಕ ಉತ್ತಮ ಮೀನುಗಾರಿಕಾ ಋತುವಿನ ನಿರೀಕ್ಷೆಯೊಂದಿಗೆ ನಾಡದೋಣಿ ಮೀನುಗಾರರು ಕಡಲಿಗೆ ಇಳಿಯುತ್ತಾರೆ.

ಈ ಸಂದರ್ಭದಲ್ಲಿ ಮರವಂತೆಯ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಧರ್ಮದರ್ಶಿ ರಾಮಚಂದ್ರ ಹೆಬ್ಬಾರ್, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಕೋಶಾಧಿಕಾರಿ ಪಿ.ಸುರೇಶ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ಸೋಮಶೇಖರ ಖಾರ್ವಿ, ಪುರುಷೋತ್ತಮ ಖಾರ್ವಿ, ರವೀಂದ್ರ ಖಾರ್ವಿ, ಸುರೇಶ, ಚಂದ್ರ, ಸುರೇಶ ಬಿ.ಬಂಗೇರ, ಮೋಹನ ಖಾರ್ವಿ, ಚೌಕಿ ವಿಠಲ ಖಾರ್ವಿ, ಕೊರಗ ಖಾರ್ವಿ, ನಾಡದೋಣಿ ಮೀನುಗಾರ ಮುಖಂಡರು, ಸ್ಥಳೀಯ ಮೀನುಗಾರರು ಭಾಗಿಯಾಗಿದ್ದರು.

Leave a Reply