ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ಬೈಂದೂರು ವಲಯ ಅರಣ್ಯ ಇಲಾಖೆ ಹಾಗೂ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ರೈತರಿಗೆ ಗಿಡ ವಿತರಣಾ ಕಾರ್ಯಕ್ರಮ ಸಂಘದ ಹೆರೂರು ಶಾಖಾ ಆವರಣದಲ್ಲಿ ಸೋಮವಾರ ಜರುಗಿತು.
ಈ ಸಂದರ್ಭ ಬೈಂದೂರು ವಲಯ ಅರಣ್ಯಧಿಕಾರಿ ಟಿ. ಕಿರಣ್ ಬಾಬು ಮಾತನಾಡಿ ವಲಯ ವ್ಯಾಪ್ತಿಯಲ್ಲಿ ಈ ಭಾರಿ ಹೆಚ್ಚಿನ ಗಿಡಗಳನ್ನು ನೆಡಲು ಉದ್ದೇಶಸಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆಯಡಿ ಕೃಷಿಕರ ಬೇಡಿಕೆಗನುಗುಣವಾಗಿ ಇಲಾಖೆಯಿಂದ ಗಿಡಗಳನ್ನು ವಿತರಿಸಲಾಗುತ್ತದೆ ಎಂದರು.
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್ ರಾಜು ಪೂಜಾರಿ ಕೃಷಿಕರಿಗೆ ಗೀಡಗಳನ್ನು ವಿತರಿಸಿದರು. ಈ ಸಂದರ್ಭ ಹೇರೂರು ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಮತ್ತು ಸುಶೀಲ ಆಚಾರ್ತಿ, ಉಪ ವಲಯ ಅರಣ್ಯಧಿಕಾರಿ ಸದಾಶಿವ, ಅರಣ್ಯ ರಕ್ಷಕ ಜನಾರ್ಧನ, ಅರಣ್ಯ ವೀಕ್ಷಕರು ಸುರೇಶ, ಗುರುರಾಜ್ ಪಡುವರಿ, ಸಂಸ್ಥೆಯ ನಿರ್ದೇಶಕರಾದ ಭೋಜ ನಾಯ್ಕ, ರಾಮಕೃಷ್ಣ ಖಾರ್ವಿ, ನಾರಾಯಣ ಶೆಟ್ಟಿ, ವಿನಾಯಕ ರಾವ್, ರಾಮ, ಸರೋಜ ಗಾಣಿಗ, ನಾಗಮ್ಮ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ, ಹಿರಿಯ ವ್ಯವಸ್ಥಾಪಕ ಸಂಜೀವ ಮಡಿವಾಳ, ಪ್ರಭಾರ ಶಾಖಾ ವ್ಯವಸ್ಥಾಪಕ ವಿಜಯ ಆರ್ ಹಾಗೂ ಸಿಬ್ಬಂದಿಗಳು ಉಪಸ್ಥಿರಿದ್ದರು.