ತ್ರಾಸಿ ಗ್ರಾ.ಪಂ ಪ.ಜಾತಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ.ಜಾತಿ ಫಲಾನುಭವಿಗಳಿಗೆ ನಿವೇಶನಾ ಹಕ್ಕುಪತ್ರಗಳನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ವಿತರಿಸಿದರು.

Call us

Click Here

ವಿತರಿಸಿ ಮಾತನಾಡಿದ ಅವರು, ಅರ್ಹ ಆರ್ಥಿಕ ದುರ್ಬಲರನ್ನು ಆಯ್ಕೆ ಮಾಡಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ. ಇಂತಹ ಯೋಜನೆಗಳು ಜನರ ಅನುಕೂಲಕ್ಕೆ ಇರುವಂತದ್ದು, ಅದು ಅರ್ಹರನ್ನು ತಲುಪಬೇಕು. ಆ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ನಲ್ಲೂ ನಿವೇಶನ ರಹಿತರ ಪಟ್ಟಿಯನ್ನು ಪಡೆದು ನಿವೇಶನ ಹಂಚಿಕೆ ಮಾಡಲಾಗುವುದು. ನಮ್ಮ ಸಮಗ್ರ ಬೈಂದೂರಿನ ಸರ್ವ ಜನರು ನಿವೇಶನ ಹೊಂದಬೇಕು, ನಿವೇಶನ ಇಲ್ಲದಿದ್ದವರು ಸಂಖ್ಯೆ ಸಂಪೂರ್ಣ ಶೂನ್ಯ ಆಗಿಸುವುದು ನನ್ನ ಗುರಿ ಎಂದರು.

ಈ ಸಂದರ್ಭದಲ್ಲಿ ತ್ರಾಸಿ ಪಂಚಾಯತ್ ಅಧ್ಯಕ್ಷರಾದ ಗೀತಾ ದೇವಾಡಿಗ ಮತ್ತು ಸ್ಥಳಿಯ ಪ್ರಮುಖರು ಉಪಸ್ಥಿತರಿದ್ದರು.

Leave a Reply