ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಗಂಗಾನಾಡು ಗ್ರಾಮದ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ 100 ರೇಷನ್ ಕಿಟ್ ವಿತರಿಸಲಾಯಿತು.
ಕುಂದಾಪುರ ಕ್ರಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾದ ಸಸಿಹಿತ್ಲು ವೆಂಕಟ ಪೂಜಾರಿ ಅವರು ಸಾಂಕೇತಿಕವಾಗಿ ವಿತರಣೆ ಮಾಡಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಇವರಿಗೆ ಶಾಲು ಹೊದಿಸಿ ಗೌರವಿಸಿದರು.
ಕೊರೊನಾ ಸಮಯದಲ್ಲಿ ಗ್ರಾಮೀಣ ಪ್ರದೇಶದ ಜನರ ಮೇಲೆ ಕಾಳಜಿಯಿಟ್ಟು ಫುಡ್ ಕಿಟ್ ನೀಡಿದ ಮಲಬಾರ್ ಗೋಲ್ಡ್ ಸಂಸ್ಥೆಯ ಸಾಮಾಜಿಕ ಕಳಕಳಿ ಹಾಗೂ ಬಡವರಿಗೆ ನೀಡುವ ಸೌಲಭ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಉಡುಪಿ ಮಲಬಾರ್ ಗೋಲ್ಡ್ ಸಂಸ್ಥೆಯ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ತಸ್ಲಿಮ್, ನದೀಮ್, ದೇವದಾಸ್ ನಾಗೂರು, ಸ್ಥಳೀಯರಾದ ಹೆರಿಯ ದೇವಾಡಿಗ, ಸುಧಾಕರ್ ಮೋಗವೀರ, ಹರೀಶ್ ಜಟ್ಟಿತ್ಲು, ರಾಘವೇಂದ್ರ ಮೋಗವೀರ ಸಸಿಹಿತ್ಲು ಮತ್ತಿತ್ತರರು ಉಪಸ್ಥಿತರಿದ್ದರು.