ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಹಕಾರಿ ಸಂಸ್ಥೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಬಲೀಕರಣ ಸಾಧ್ಯವಾಗಿದ್ದು, ಜನರ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಸೋಮವಾರ ಇಲ್ಲಿನ ರಥಬೀದಿಯ ಶಾಂತಿ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ಬೈಂದೂರು ಅರ್ಬನ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟಿಸಿ ಶುಭಹಾರೈಸಿದರು.
ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಛೇರಿ ಉದ್ಘಾಟಿಸಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಪ್ರಕಾಶ್ಚಂದ್ರ ಶೆಟ್ಟಿ ಲಾಕರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ ಪೂಜಾರಿ ಪಾಸ್‌ಪುಸ್ತಕ ಬಿಡುಗಡೆಗೊಳಿಸಿದರು. ರಿಯಾಜ್ ಅಹಮ್ಮದ್ ಶೇರು ಪತ್ರ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ ಕಂಪ್ಯೂಟರ್ ಕೌಂಟರ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ. ಬಾಬು ಶೆಟ್ಟಿ ಕ್ಯಾಶ್ ಕೌಂಟರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಹಕಾರಿ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ವಿಠಲ ಶೇರುಗಾರ್, ಕೊಲ್ಲೂರು ದೇವಳ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಕಟ್ಟಡ ಮಾಲಿಕ ಗಣಪಯ್ಯ ಶೇರುಗಾರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ, ಉಪ್ಪುಂದ ಮೂರ್ತೇದಾರರ ಸೇ.ಸಹಕಾರಿಯ ಅಧ್ಯಕ್ಷ ಮೋಹನ ಪೂಜಾರಿ ಮೊದಲಾದವರು ಇದ್ದರು. ಸೊಸೈಟಿಯ ಅಧ್ಯಕ್ಷ ಎಸ್. ಮಣಿಕಂಠ ದೇವಾಡಿಗ, ಉಪಾಧ್ಯಕ್ಷ ಮಂಜುನಾಥ ಪೂಜಾರಿ ತಗ್ಗರ್ಸೆ, ನಿರ್ದೇಶಕರುಗಳಾದ ಪ್ರಸಾದ್ ಪ್ರಭು, ನರೇಂದ್ರ ಶೇಟ್, ರಾಜೇಶ್ ಬಿಲ್ಲವ, ಮಹಮ್ಮದ್ ಅಶ್ರಫ್, ಮಾಣಿಕ್ಯ ಹೋಬಳಿದಾರ್, ಎಚ್. ಸುರೇಶ್ ಶೆಟ್ಟಿ, ರಾಜು ಕೆ. ಮೊಗವೀರ, ಸವಿತಾ ದಿನೇಶ್ ಗಾಣಿಗ, ನಾಗಮ್ಮ ಲಕ್ಷ್ಮಣ ಕೊರಗ, ಪ್ರೇಮಾ ವಿ. ಶೆಟ್ಟಿ, ದೀಪಿಕಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.