ಹಳಗೇರಿ ದಟ್ಟಾರಣ್ಯ ಪ್ರದೇಶವನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಬಾರದು: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಖಂಬದಕೋಣೆ ಗ್ರಾಮದ ಹಳಗೇರಿಯ ಸರ್ವೆ ನಂಬ್ರ 166/ಪಿ1ರಲ್ಲಿ ಸುಮಾರು 53 ಎಕ್ರೆ ದಟ್ಟಾರಣ್ಯ ಪ್ರದೇಶವನ್ನು ಪೊರಂಬೂಕು ಶೀರ್ಷಿಕೆಯಿಂದ ವಿರಹಿತಗೊಳಿಸಿ ಕೈಗಾರಿಕಾ ಉದ್ದೇಶಕ್ಕೆ ಬಳಸಲು ಈಗ ಇರುವ ಅರಣ್ಯ ನಾಶಕ್ಕೆ ಅವಕಾಶ ಕೊಡಬಾರದಾಗಿ ಹಳಗೇರಿ, ತೆಂಕಬೆಟ್ಟು, ಗುಮ್ಮಿತೋಟ, ಖಂಬದಕೋಣೆ, ನಾಗೂರು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆ ಸದಸ್ಯರು ಖಂಬದಕೋಣೆ ಗ್ರಾಪಂ ಎದುರು ಶನಿವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.

Call us

Click Here

ಈ ಪ್ರದೇಶವು 75ರಿಂದ 100ಮೀ ವರೆಗೆ ಎತ್ತರವಿರುವ ಕಿರು ಪರ್ವತವಾಗಿದ್ದು, ದಟ್ಟವಾದ ಅರಣ್ಯವಾಗಿದೆ. ಅನೇಕ ವನ್ಯಪ್ರಾಣಿ, ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಕೈಗಾರಿಕೆಗಾಗಿ ಈ ಸ್ಥಳದಲ್ಲಿರುವ ಎಲ್ಲಾ ಮರಗಳನ್ನು ಕಟಾವು ಮಾಡಿದರೆ ಇದರಿಂದ ಅವಲಂಬಿತವಾದ ಕೃಷಿ ಕುಟುಂಬಗಳಿಗೆ ತೊಂದರೆಯಾಗಲಿದೆ. ಅಲ್ಲದೇ ಪ್ರಕೃತಿದತ್ತವಾದ ಈ ಗುಡ್ಡವನ್ನು ಸಮತಟ್ಟು ಮಾಡುವುದರಿಂದ ಭೂಕುಸಿತದಂತಹ ನೈಸರ್ಗಿಕ ವಿಕೋಪದ ಸಾಧ್ಯತೆಗಳಿವೆ. ಈ ಭಾಗದ ಜನರ ಜೀವನಾಡಿಯಾಗಿರುವ ಗುಡ್ಡವು ಈ ಭಾಗದ ಜನರ ದೈನಂದಿನ ಜೀವನಕ್ಕೆ ತುಂಬಾ ಉಪಯುಕ್ತವಾಗಿದೆ. ಜೀವರಕ್ಷಕ ಗುಡ್ಡದ ಅರಣ್ಯ ನಾಶಮಾಡಿ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ ಪರಿಸರ ಮಾಲೀನ್ಯ ಮಾಡುವ ಸರ್ಕಾರದ ಉದ್ದೇಶವನ್ನು ಗ್ರಾಮಸ್ಥರು ಒಕ್ಕೊರಳಿನಿಂದ ಖಂಡಿಸಿದರು.

ನಂತರ ಗ್ರಾಪಂ ಅಧ್ಯಕ್ಷ ಸುಕೇಶ ಶೆಟ್ಟಿ, ಪಿಡಿಒ ಪೂರ್ಣಿಮಾ ಇವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧ್ಯಕ್ಷರು, ಸರ್ಕಾರದಿಂದ ಈ ಬಗ್ಗೆ ಯಾವುದೇ ಸುತ್ತೋಲೆ ಗ್ರಾಪಂಗೆ ಬರಲಿಲ್ಲ. ಅಲ್ಲದೇ ಈ ವಿಚಾರದ ಬಗ್ಗೆ ಹಿಂದೆ ಗ್ರಾಮಸ್ಥರು ನೀಡಿದ ಮನವಿಯನ್ನು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಸಾಧಕ ಬಾಧಕಗಳನ್ನು ಚರ್ಚಿಸಿ ನಿರ್ಣಯ ಕೈಗೊಂಡಿದ್ದೇವೆ. ಅಲ್ಲದೇ ಪಂಚಾಯತ್ ಗಮನಕ್ಕೆ ಬಾರದೇ ಯಾವುದೇ ರೀತಿಯ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಗುಡ್ಡ ಹಾಗೂ ಅರಣ್ಯ ನಾಶಪಡಿಸಿ ಕೈಗಾರಿಕೆಗಳನ್ನು ಸ್ಥಾಪಿಸುವ ಪ್ರಸ್ತಾಪ ಬಂದರೆ ಇದನ್ನು ವಿರೋಧಿಸಿ ಗ್ರಾಪಂನ ಎಲ್ಲಾ ಸದಸ್ಯರು ಪಕ್ಷಭೇಧ ಮರೆತು ಗ್ರಾಮಸ್ಥರೊಂದಿಗೆ ಕೈಜೋಡಿಸುತ್ತೇವೆ ಎಂದು ಘೋಷಿಸಿದರು. ಮಾಜಿ ಅಧ್ಯಕ್ಷ ರಾಜೆಶ್ ದೇವಾಡಿಗ, ಗ್ರಾಮಕರಣಿಕ ಹನುಮಂತರಾಯ ಕುರಿ ಇದ್ದರು.

ಪ್ರಭಾಕರ ಶೆಟ್ಟಿ, ನಳಿನ್‌ಕುಮಾರ್ ಶೆಟ್ಟಿ, ರಾಜೇಂದ್ರ ಗಾಣಿಗ, ಶಂಕರ ದೇವಾಡಿಗ, ಸಂತೋಷ್ ಪೂಜಾರಿ, ನೀಲಕಂಠ ಆಚಾರ್ಯ, ಶಿರಾಮ ಹಳಗೇರಿ, ಮಂಜು ಹಳಗೇರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಇದ್ದರು.

ಇಂದಿನ ಕಾಲಘಟ್ಟದಲ್ಲಿ ಉತ್ತಮ ಪರಿಸರದ ಜತೆಗೆ ಅರಣ್ಯದ ಅಗತ್ಯತೆಗಳನ್ನು ಮನಗಂಡರೂ ಸರ್ಕಾರ ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶದ ಮೂಲಕ ಪರಿಸರ ಹಾನಿ ಹಾಗೂ ಸಂಭಾವ್ಯ ಪ್ರಕೃತಿ ವಿಕೋಪಕ್ಕೆ ಕಾರಣವಾಗಬಲ್ಲ ನಿರ್ಧಾರ ಕೈಗೊಂಡಿರುವುದು ವಿಪರ್ಯಾಸ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾಗಬಹುದು. – ನಳಿನ್‌ಕುಮಾರ್ ಶೆಟ್ಟಿ ಹಳಗೇರಿ ನಾಗೂರು

Click here

Click here

Click here

Click Here

Call us

Call us

Leave a Reply