ಉಡುಪಿ: ಮೈಕ್ರೋಬಯಾಲಾಜಿಸ್ಟ್ ಹುದ್ದೆಗೆ ನೇರ ಸಂದರ್ಶನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ಪ್ರಯೋಗಾಲಯದಲ್ಲಿ ಖಾಲಿ ಇರುವ ಮೈಕ್ರೋಬಯಾಲಾಜಿಸ್ಟ್ ಹುದ್ದೆಗೆ, ಮೆಡಿಕಲ್ ಗ್ರಾಜುಯೇಟ್ ವಿಥ್ ಪೋಸ್ಟ್ ಗ್ರಾಜುವೇಟ್ ಡಿಗ್ರಿ / ಡಿಪ್ಲೋಮಾ ಅಥವಾ ಮೆಡಿಕಲ್ ಗ್ರಾಜುಯೇಟ್ ವಿಥ್ ಟು ಎಕ್ಸ್ಪೀರಿಯನ್ಸ್ ಇನ್ ಲ್ಯಾಬೋರೇಟರಿ ಸೈನ್ಸಸ್ ಅಥವಾ ಎಮ್.ಎಸ್.ಸಿ ಇನ್ ಮೆಡಿಕಲ್ ಮೈಕ್ರೋಬಯಾಲಜಿ ಅರ್ಹತೆ ಹೊಂದಿರುವವರಿಗೆ, ಮಾಸಿಕ 40,000 ರೂ. ವೇತನದಂತೆ ಗುತ್ತಿಗೆ ಆಧಾರದಲ್ಲಿ 2022 ಮಾರ್ಚ್ 31 ಅಥವಾ ಮುಂದಿನ ಆದೇಶದವರೆಗೆ ನೇಮಕಾತಿ ಮಾಡಿಕೊಳ್ಳಲು ಜುಲೈ 26 ರಂದು ಬೆಳಗ್ಗೆ 10.30ರಿಂದ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

Call us

Click Here

ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply