ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಗೌರವಗಳಿಗೆ ಪಾತ್ರರಾದ ಎನ್.ಗುರುರಾಜ್ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ 2021ನೇ ಸಾಲಿನ ಪತ್ರಿಕಾದಿನದ ಗೌರವವನ್ನು ಅವರ ಪರ್ಕಳದ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರದಾನಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎನ್. ಗುರುರಾಜ್ ಅವರು, ಮುದ್ರಣ ಮಾಧ್ಯಮ ಇಂದಿಗೂ ವಿಶ್ವಹಾರ್ಹತೆಯನ್ನು ಉಳಿಸಿಕೊಳ್ಳಲು ಎನ್ ಗುರುರಾಜ್ ಅವರಂತಹ ಅನೇಕ ಹಿರಿಯ ಪತ್ರಕರ್ತರು ಮಾಡಿದ ನಿಸ್ವಾರ್ಥ ಪತ್ರಕರ್ತರ ಅಪೂರ್ವ ಸೇವೆ ಕಾರಣವಾಗಿದೆ. ಗುರುರಾಜ್ ಸದಾ ಅಭಿನಂದನಾರ್ಹರು ಎಂದು ಹರಿಕೃಷ್ಣ ಪುನರೂರು ಹೇಳಿದರು. ಪತ್ರಿಕೋದ್ಯಮ ಸಂದಿಗ್ದತೆಯನ್ನು ಎದುರಿಸುತ್ತಿದೆ, ಹೀಗೆ ವಿಶ್ರಾಂತರನ್ನು ಗೌರವಿಸುವುದು ಸಂತೋಷದ ವಿಷಯ ಎಂದು ಹೇಳಿದರು.
ವಿಶ್ರಾಂತ ಜೀವನ ನಡೆಸುತ್ತಿರುವ ಸಾಧಕರನ್ನು ಅವರವರ iನೆಗೆ ತೆರಳಿ ಗೌರವಿಸುವ ಸಂಪ್ರದಾಯ ವಿನೂತನವಾದುದು. 13 ವರ್ಷಗಳಿಂದ ನಿರಂತರ ಹೀಗೆ ಹಿರಿಯರೆಡೆಗೆ ನಮ್ಮ ನಡಿಗೆ ಮಾಡುತ್ತಿರುವ ಡಾ. ಶೇಖರ ಅಜೆಕಾರು ಅವರ ಕೆಲಸ ಸ್ತುತ್ಯರ್ಹ ಎಂದು ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅವರು ಅಭಿಪ್ರಾಯಪಟ್ಟರು. ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ಅವರು ಮಾತನಾಡಿ ಪತ್ರಿಕೆಗಳನ್ನು, ಮಾಧ್ಯಮಗಳನ್ನು ಧಮನ ಮಾಡುವ ಸರಕಾರಗಳ ನೀತಿಯನ್ನು ಖಂಡಿಸಿದರು.
ಈ ಸಂದರ್ಭ ನಿರ್ಮಲಾ ಗುರುರಾಜ್, ಪ್ರಸಿದ್ಧ ಕಲಾವಿದ ಪಿ.ಎನ್ ಆಚಾರ್ಯ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಬೊಮ್ಮರಬೆಟ್ಟು, ವಸಂತರಾಜ್, ಪತ್ರಕರ್ತ ದೇವರಾಯ ಪ್ರಭು. ಛಾಯಾಗ್ರಾಹಕ ಸಂತೋಷ ಜೈನ್ ಈದು ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಪದ್ಮಾಕರ ಭಟ್ ಈದು ಪ್ರಸ್ತಾವಿಕ ಮಾತುಗಳನ್ನಾಡಿದರು, ಯುವ ಸಂಘಟಕ ರಾಘವೇಂದ್ರ ಪ್ರಭು ಕರ್ವಾಲೋ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಸೇವಕ ನರಸಿಂಹಮೂರ್ತಿ ರಾವ್ ವಂದಿಸಿದರು.